ಅಮೆರಿಕದಲ್ಲಿ ಶೂಟೌಟ್: ಭಾರತ ಮೂಲದ ವ್ಯಕ್ತಿ ಸಾವು, ಮತ್ತೋರ್ವ ಗಂಭೀರ

ಅಮೆರಿಕದ ಜಾರ್ಜಿಯಾದಲ್ಲಿ 2 ಪ್ರತ್ಯೇಕ ಕಡೆಗಳಲ್ಲಿ ಶೂಟೌಟ್ ಆಗಿದ್ದು, ಘಟನೆಯಲ್ಲಿ ಭಾರತ ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಜಾರ್ಜಿಯಾ: ಅಮೆರಿಕದ ಜಾರ್ಜಿಯಾದಲ್ಲಿ 2 ಪ್ರತ್ಯೇಕ ಕಡೆಗಳಲ್ಲಿ ಶೂಟೌಟ್ ಆಗಿದ್ದು, ಘಟನೆಯಲ್ಲಿ ಭಾರತ ಮೂಲದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಜಾರ್ಜಿಯಾ ಬರ್ನೆಟ್ ಫೆರ್ರಿ ರಸ್ತೆಯಲ್ಲಿರುವ ಹೈಟೆಕ್ ಕ್ವಿಕ್ ಸ್ಟಾಪ್ ನಲ್ಲಿ ಮೊದಲ ದಾಳಿಯಾಗಿದ್ದು, ಈ ವೇಳೆ 44 ವರ್ಷದ ಭಾರತ ಮೂಲದ ಪರಮ್ ಜೀತ್ ಸಿಂಗ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಪರಮ್ ಜೀತ್ ಸಿಂಗ್ ಗೆ  ಹೈಸ್ಕೂಲ್ ನಲ್ಲಿ ಓದುತ್ತಿದ್ದ ಇಬ್ಬರು ಮಕ್ಕಳಿದ್ದರು ಎಂದು ತಿಳಿದುಬಂದಿದೆ. ಸ್ಟೋರ್ ನಲ್ಲಿ ಪರಮ್ ಜೀತ್ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿಗೆ ಆಗಮಿಸಿದ 28 ವರ್ಷದ ಸಮರ್ ರಷೀದ್ ನಿಕೋಲ್ಸನ್ ಎಂಬ ದುಷ್ಕರ್ಮಿ  ಹಣಕ್ಕಾಗಿ ಹಲವು ಸುತ್ತು ಗುಂಡಿಹಾರಿಸಿದ್ದಾನೆ.
ಈ ವೇಳೆ ಪರಮ್ ಜೀತ್ ಸಿಂಗ್ ಅವರ ಎದೆ, ಹೊಟ್ಟೆಗೆ ಗುಂಡುಗಳು ತಾಗಿದ್ದು, ಪರಮ್ ಜೀತ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಅದೇ ಬರ್ನೆಟ್ ಫೇರ್ರಿ ರಸ್ತೆಯ ಮತ್ತೊಂದು ಶಾಪಿಂಗ್ ಮಾಲ್ ಗೆ ತೆರಳಿದ ದುಷ್ಕರ್ಮಿ  ಅಲ್ಲಿದ್ದ ಮತ್ತೋರ್ವ ವ್ಯಕ್ತಿ ಭಾರತ ಮೂಲದ 30 ವರ್ಷದ ಪಾರ್ಥೀ ಪಟೇಲ್ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಶಾಪ್ ನಲ್ಲಿದ್ದ ಹಣವನ್ನು ಹೊತ್ತು ಪರಾರಿಯಾಗಿದ್ದು, ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಪಾರ್ಥೀ ಪಟೇಲ್  ರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಪಾರ್ಥೀ ಪಟೇಲ್ ಕೂಡ ಗಂಭೀರವಾಗಿದ್ದಾರೆ ಎನ್ನಲಾಗಿದೆ.
ವಿಚಾರ ತಿಳಿಯುತ್ತಿದ್ದರಂತೆಯೇ ಸ್ಥಳಕ್ಕಾಗಮಿಸಿದ ಜಾರ್ಜಿಯಾ ಪೊಲೀಸರು ಶಾಪಿಂಗ್ ಮಾಲ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ತುರ್ತು ಕಾರ್ಯಾಚರಣೆ ಆರೋಪಿ ಸಮರ್ ರಷೀದ್ ನಿಕೋಲ್ಸನ್ ನನ್ನು  ಬಂಧಿಸಿದ್ದಾರೆ. ಪ್ರಸ್ತುತ ಬಂಧಿತ ಆರೋಪಿ ಸಮರ್ ರಷೀದ್ ನಿಕೋಲ್ಸನ್ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನಂತೆ. ಈತನ ಮೇಲೆ ಕೊಲೆ ಯತ್ನ, ದರೋಡೆ. ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು  ದಾಖಲಾಗಿದ್ದವು ಎನ್ನಲಾಗಿದೆ. ಪ್ರಸ್ತುತ ಬಂಧಿತ ಸಮರ್ ರಷೀದ್ ನಿಕೋಲ್ಸನ್ ನನ್ನು ಫ್ಲಾಯ್ಡ್ ಕೌಂಟಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com