ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳ ಪೂರ್ವ ಹಿಂದೂ ಮಹಾಸಾಗರ ಪ್ರವೇಶ!

ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳು ಪೂರ್ವ ಹಿಂದೂ ಮಹಾಸಾಗರವನ್ನು ಪ್ರವೇಶಿಸಿವೆ.
ಚೀನಾ ಯುದ್ಧ ನೌಕೆಗಳು
ಚೀನಾ ಯುದ್ಧ ನೌಕೆಗಳು
Updated on: 
ಶಾಂಘೈ: ಮಾಲ್ಡೀವ್ಸ್ ಬಿಕ್ಕಟ್ಟಿನ ನಡುವೆಯೇ ಚೀನಾ ಯುದ್ಧನೌಕೆಗಳು ಪೂರ್ವ ಹಿಂದೂ ಮಹಾಸಾಗರವನ್ನು ಪ್ರವೇಶಿಸಿವೆ. 
ಒಂದು ಫ್ರಿಗೆಟ್, ಹಡಗು, 30,000 ಟನ್ ಕೊಂಡೊಯ್ಯುವ ಸಾಮರ್ಥ್ಯವುಳ್ಳ ಸಾರಿಗೆ ಡಾಕ್, 3 ಸಪೋರ್ಟ್ ಟ್ಯಾಂಕರ್ ಗಳು ಹಿಂದೂ ಮಹಾಸಾಗರವನ್ನು ಪ್ರವೇಶಿಸಿರುವುದರ ಬಗ್ಗೆ ಚೀನಾದ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. 
ಯುದ್ಧನೌಕೆಗಳು ಹಾಗೂ ಇತರ ಉಪಕರಣಗಳನ್ನು ಗಮನಿಸಿದರೆ ಭಾರತ ಹಾಗೂ ಚೀನಾದ ನೌಕಾಪಡೆಯ ನಡುವಿನ ಅಂತರ ಹೆಚ್ಚೇನು ಇಲ್ಲ ಎಂದು ಚೀನಾ ವೆಬ್ ಸೈಟ್ ಹೇಳಿದ್ದು, ಯಾವಾಗ ಯುದ್ಧನೌಕೆಗಳನ್ನು ನಿಯೋಜನೆ ಮಾಡಲಾಗಿತ್ತು ಎಂದು ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿಲ್ಲ. 
ಚೀನಾದ ಒಬಿಒಆರ್ ಯೋಜನೆಗೆ ಮಾಲ್ಡೀವ್ಸ್ ಅಧ್ಯಕ್ಷ ಸಹಿ ಹಾಕಿದ ನಂತರ ಮಾಲ್ಡೀವ್ಸ್ ಮೇಲೆ ಪ್ರಭಾವ ಬೀರುವ ವಿಚಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ಭಾರತ-ಚೀನಾ ನಡುವೆ ಪೈಪೋಟಿ ಏರ್ಪಟ್ಟಿದೆ. ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ನ ಕ್ರಮವನ್ನು ವಿರೋಧಿಸಿದ್ದ ವಿಪಕ್ಷಗಳು ಬಿಕ್ಕಟ್ಟಿಗೆ ಬಗೆಹರಿಸುವುದಕ್ಕಾಗಿ ಭಾರತ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com