ಮಹಾತ್ಮಗಾಂಧಿ ಸಹಿ ಇರುವ ಅಪರೂಪದ ಪೋಟೋ ಅಮೆರಿಕಾದಲ್ಲಿ 10 ಸಾವಿರ ಡಾಲರ್ ಗೆ ಹರಾಜು

ರಾಷ್ಟ್ರಪಿತ ಮಹಾತ್ಮಗಾಂಧಿ ಮದನ್ ಮೋಹನ್ ಮಾಳವಿಯ ಜೊತೆಗಿರುವ ಪೋಟೋ ಅಮೆರಿಕಾದಲ್ಲಿ10 ಸಾವಿರ ಡಾಲರ್ ಗೆ ಹರಾಜು ಆಗುವ ನಿರೀಕ್ಷೆಯಲ್ಲಿದೆ.
ರಾಷ್ಟ್ರಪತಿ ಮಹಾತ್ಮಗಾಂಧಿ ಅವರ(ಸಾಂದರ್ಭಿಕ ಪೋಟೋ)
ರಾಷ್ಟ್ರಪತಿ ಮಹಾತ್ಮಗಾಂಧಿ ಅವರ(ಸಾಂದರ್ಭಿಕ ಪೋಟೋ)
Updated on: 

ಅಮೆರಿಕಾ: ರಾಷ್ಟ್ರಪಿತ ಮಹಾತ್ಮಗಾಂಧಿ ಮದನ್ ಮೋಹನ್ ಮಾಳವಿಯ ಜೊತೆಗಿರುವ ಪೋಟೋ ಅಮೆರಿಕಾದಲ್ಲಿ 10 ಸಾವಿರ ಡಾಲರ್  ಗೆ ಹರಾಜು ಆಗುವ  ನಿರೀಕ್ಷೆಯಲ್ಲಿದೆ.

ಮಹಾತ್ಮಗಾಂಧಿ ಸಹಿ ಹೊಂದಿರುವ ಈ  ಪೋಟೋವನ್ನು 1931ರಲ್ಲಿ ಲಂಡನ್ ನಲ್ಲಿ ನಡೆದಿದ್ದಎರಡನೇ ದುಂಡು ಮೇಜಿನ ಸಮ್ಮೇಳನ ಸಂದರ್ಭದಲ್ಲಿ ತೆಗೆಯಲಾಗಿದ್ದು,ಪ್ರೇಸ್ ಆಫ್ ಗ್ರೇಟ್ ಬ್ರಿಟನ್  ಹಕ್ಕುಸ್ವಾಮ್ಯಕ್ಕೊಳಪಟ್ಟಿದೆ.

 ನೋವಿನಿಂದ ನರಳುತ್ತಿದ್ದ ಮಹಾಾತ್ಮಗಾಂಧಿ ಬಲಕೈ ಬದಲಿಗೆ ಎಡಗೈನಿಂದ ಸಹಿ ಹಾಕಿದ್ದಾರೆ. 1931 ಆಗಸ್ಟ್ 19ರಂದು ಈ ಸಹಿ ಹಾಕಿರುವ ಸಾಧ್ಯತೆ ಇದೆ ಅಮೆರಿಕಾ ತಿಳಿಸಿದೆ.

ಭಾರತೀಯ ಸಂವಿಧಾನ ಸುಧಾರಣೆಗಾಗಿ ಲಂಡನ್ ನಲ್ಲಿ 1930ರಿಂದ 1932 ರವರೆಗೆ ಮೂರು  ದುಂಡುಮೇಜಿನ ಸಮ್ಮೇಳನವನ್ನು ಬ್ರಿಟನ್ ಸರ್ಕಾರ ಆಯೋಜಿಸಿರುತ್ತದೆ.


ಆ ಸಂದರ್ಭದಲ್ಲಿ ಮದನ್ ಮಾಳವೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು,ಅಸಹಕಾರ ಚಳವಳಿಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು. ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ಜೊತೆಯಲ್ಲಿ ಮದನ್ ಮಾಳವೀಯ ಜೊತೆ ಪ್ರತಿನಿಧಿಸಿದ್ದರು.

ಈ ಪೋಟೋಗೆ ಮಾರ್ಚ್ 7ರವರೆಗೂ ಬಿಡ್ಡಿಂಗ್ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com