ಅಬುಧಾಬಿಯಲ್ಲಿರುವ ಕೇರಳ ಮೂಲದ ವ್ಯಕ್ತಿ 20 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದಿದ್ದಾರೆ.

12 ಮಿಲಿಯನ್ (20 ಕೋಟಿ ರೂಪಾಯಿ) ಅಬುಧಾಬಿಯಲ್ಲಿ ಅತಿ ಹೆಚ್ಚು ಮೊತ್ತದ ಲಾಟರಿ ಆಗಿದ್ದು, ಹರಿಕೃಷ್ಣನ್ ವಿ ನಾಯರ್ ಲಾಟರಿ ಗೆದ್ದಿರುವ ಅದೃಷ್ಟವಂತರಾಗಿದ್ದಾರೆ, 2002 ರಿಂದ ಅಬುಧಾಬಿಯಲ್ಲೇ ನೆಲೆಸಿರುವ...
ಅಬುಧಾಬಿಯಲ್ಲಿರುವ ಕೇರಳ ಮೂಲದ ವ್ಯಕ್ತಿ 20 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದಿದ್ದಾರೆ.
ಅಬುಧಾಬಿಯಲ್ಲಿರುವ ಕೇರಳ ಮೂಲದ ವ್ಯಕ್ತಿ 20 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದಿದ್ದಾರೆ.
ದುಬೈ: 12 ಮಿಲಿಯನ್ (20 ಕೋಟಿ ರೂಪಾಯಿ) ಅಬುಧಾಬಿಯಲ್ಲಿ ಅತಿ ಹೆಚ್ಚು ಮೊತ್ತದ ಲಾಟರಿ ಆಗಿದ್ದು, ಹರಿಕೃಷ್ಣನ್ ವಿ ನಾಯರ್ ಲಾಟರಿ ಗೆದ್ದಿರುವ ಅದೃಷ್ಟವಂತರಾಗಿದ್ದಾರೆ, 2002 ರಿಂದ ಅಬುಧಾಬಿಯಲ್ಲೇ ನೆಲೆಸಿರುವ ಹರಿಕೃಷ್ಣನ್ ಈ ಹಿಂದೆಯೂ ಎರಡು ಬಾರಿ ಲಾಟರಿ ಟಿಕೆಟ್ ತಂದಿದ್ದರಂತೆ ಆದರೆ ಲಾಟರಿ ಗೆದ್ದಿರಲಿಲ್ಲ. 
ಕುಟುಂಬದವರೊಂದಿಗೆ ಪ್ರಪಂಚ ಸುತ್ತುವ ಆಸೆ ಇದ್ದು ಈಗ ಅದಕ್ಕೆ ಕಾಲ ಕೂಡಿಬಂದಿದೆ ಎನ್ನುತ್ತಾರೆ ಲಾಟರಿ ಬಹುಮಾನ ಗೆದ್ದಿರುವ ಹರಿಕೃಷ್ಣನ್, ವಿಶ್ವ ಸುತ್ತುವ ಆಸೆಯ ಜೊತೆಗೆ ಸಮಾಜಕ್ಕಾಗಿ ಹಣವನ್ನು ವಿನಿಯೋಗಿಸುವುದೂ ಸಹ ಹರಿಕೃಷ್ಣನ್ ಅವರ ಆದ್ಯತೆಯ ಪಟ್ಟಿಯಲ್ಲಿದ್ದು, ಭಾರತದಲ್ಲಿ ಹೊಸ ಮನೆ ಖರೀದಿಸುವುದು ಹಾಗೂ ಮಗನ ವಿದ್ಯಾಭ್ಯಾಸಕ್ಕೆ ಹಣ ಮೀಸಲಿಡುವುದಾಗಿ ಹರಿಕೃಷ್ಣನ್ ತಿಳಿಸಿದ್ದಾರೆ. 
ಇನ್ನು ಟಿಕೆಟ್ ತಂದಿದ್ದ ಪತಿಯನ್ನು ಲಾಟರಿ ಗೆದ್ದಿದ್ದೀರಿ ಎಂದು ಹೇಳಿ ತಮಾಷೆ ಮಾಡಲು ಹರಿಕೃಷ್ಣನ್ ಅವರ ಪತ್ನಿ ಯೋಜನೆ ರೂಪಿಸಿದ್ದರಂತೆ, ಆದರೆ ಹರಿಕೃಷ್ಣನ್ ಅವರು ಸ್ವತಃ ಕರೆ ಮಾಡಿ ಲಾಟರಿ ಗೆದ್ದಿರುವುದಾಗಿ ತಿಳಿಸಿದಾಗ ಪತ್ನಿಗೆ ಅಚ್ಚರಿಯಾಗಿದ್ದು, ಪತಿಯೇ ನನ್ನ ಬಳಿ ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com