ಯುನೈಟೆಡ್ ಸ್ಟೇಟ್ಸ್ ನಾಗರಿಕತ್ವ ಮತ್ತು ವಲಸೆ ನಿಯಮ ಸೆಕ್ಷನ್ 104(c), AC-21 ರ ಅಡಿಯಲ್ಲಿ ಹೆಚ್ 1ಬಿ ವೀಸಾ ಅವಧಿ ಮುಕ್ತಾಯವಾದ ವಿದೇಶಿಗರನ್ನು ಗಡಿಪಾರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಅಂತೆಯೇ ಪ್ರಸ್ತುತ 6 ವರ್ಷಗಳ ಅವಧಿ ಹೊಂದಿರುವ ಹೆಚ್ 1ಬಿ ವೀಸಾ ಅವಧಿಯನ್ನು ಅಗತ್ಯವಿದ್ದರೆ ಅವಧಿ ವಿಸ್ತರಣೆಗೆ ಅವಕಾಶ ಕೋರಬಹುದು. ಸೆಕ್ಷನ್ 106(a)-(b), AC21 ರ ಅಡಿಯಲ್ಲಿ ಒಂದು ವರ್ಷದ ಭತ್ಯೆ ಏರಿಕೆಯಡಿಯಲ್ಲಿ ಒಂದು ವರ್ಷಗಳ ವೀಸಾ ಅವಧಿ ವಿಸ್ತಾರಕ್ಕೆ ಮನವಿ ಮಾಡಿಕೊಳ್ಳಬಹುದು ಎಂದು ಯುನೈಟೆಡ್ ಸ್ಟೇಟ್ಸ್ ನಾಗರಿಕತ್ವ ಮತ್ತು ವಲಸೆ ಸೇವೆಗಳ ಸಚಿವಾಲಯ ಮಾಧ್ಯಮ ವಕ್ತಾರ ಜೋನಾಥನ್ ವಿತಿಂಗ್ಟನ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.