ಭಾರತ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಹಿಂತಿರುಗಿ ಬನ್ನಿ, ನಿಮ್ಮ ಅಗತ್ಯತೆ ಇದೆ: ಬಹ್ರೇನ್'ನಲ್ಲಿ ರಾಹುಲ್ ಹೇಳಿಕೆ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್'ಡಿಎ ಸರ್ಕಾರ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುತ್ತಿದ್ದು, ಇಂದು ಭಾರತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಬಹ್ರೇನ್'ನಲ್ಲಿರುವ ಅನಿವಾಸಿ ಭಾರತೀಯರು ತವರಿಗೆ...
ಬಹ್ರೇನ್'ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಬಹ್ರೇನ್'ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Updated on
ಮನಾಮ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್'ಡಿಎ ಸರ್ಕಾರ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುತ್ತಿದ್ದು, ಇಂದು ಭಾರತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಬಹ್ರೇನ್'ನಲ್ಲಿರುವ ಅನಿವಾಸಿ ಭಾರತೀಯರು ತವರಿಗೆ ಮರಳಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ. 
ಬಹ್ರೇನ್'ನಲ್ಲಿ ಅನಿವಾಸಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡಿರುವ ಅವರು, ನಿರುದ್ಯೋಗಸ್ಥ ಯುವಕರನ್ನು ಕೋಮುವಾದಿಗಳನ್ನಾಗಿ ಮಾಡುತ್ತಿರುವ ಕೇಂದ್ರ ಸರ್ಕಾರ ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುತ್ತಿದೆ. ಹೀಗಾಗಿ ದೇಶ ಇಂದು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಅನಿವಾಸಿ ಭಾರತಿಯರು ತವರಿಗೆ ವಾಪಸ್ಸಾಗಬೇಕೆಂದು ಹೇಳಿದ್ದಾರೆ. 
ಹೌದು, ನಾವು ತಪ್ಪಿ ಮಾಡಿದ್ದೇವೆ. ನಾವೂ ಕೂಡ ಮನುಷ್ಯರೇ. ನಾವೂ ಕೂಡ ತಪ್ಪು ಮಾಡುತ್ತೇವೆ. ಆದರೆ, ಮತ್ತೆ ಹೊಸ ದೃಷ್ಟಿಯೊಂದಿಗೆ ಹೊಸ ಕಾಂಗ್ರೆಸ್ ಪಕ್ಷವನ್ನು ಹೊರತರುತ್ತೇವೆ. ಅಂತರವಿದೆ ಎಂದು ನೀವು ಹೇಳುತ್ತೀರಿ. ಹೌದು ಮಾಧ್ಯಮಗಳ ನಡುವೆ ಅಂತರವಿದೆ. ಮಾಧ್ಯಮಗಳಲ್ಲಿ ಏಕಪಕ್ಷೀಯವಾಗಿ ಪ್ರಚಾರಗಳು ನಡೆಯುತ್ತಿವೆ. ಆದರೆ, ನಾವು ಈ ಎಲ್ಲದರ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾವೆ. ಗುಜರಾತ್ ರಾಜ್ಯ ಬಿಜೆಪಿಯವರ ಭದ್ರಕೋಟೆಯಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಅಂತರಗಳಲ್ಲಿ ಸೋಲಿನಿಂದ ತಪ್ಪಿಸಿಕೊಂಡಿದೆ. 
ನವ ಭಾರತದ ಕಡೆಗೆ ನಮ್ಮ ದೃಷ್ಟಿಕೋನವಿದ್ದು, ಜನರಿಗಾಗಿ ಹೊಸ ಕಾಂಗ್ರೆಸ್ ಪಕ್ಷ ಹೊರಬರುತ್ತಿದ್ದು, ನಿಮಗೆ ಹೊಸ ಕಾಂಗ್ರೆಸ್ ಪಕ್ಷವನ್ನು ಕೊಟ್ಟರೆ ಬಿಜೆಪಿಯನ್ನು ಸೋಲಿಸುವುದು ದೊಡ್ಡ ವಿಚಾರವೇನಲ್ಲ. ನಾವು ತಪ್ಪು ಮಾಡಿದ್ದೇವೆ ನಿಜ. ಆದರೆ, ಪಕ್ಷದಲ್ಲಿ ನಮಗೆ ಶಕ್ತಿಯಿದೆ. ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದಾರ ಜಿಡಿಪಿ ಶೇ.2 ರಷ್ಟು ಕುಸಿಯಲಿದೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಹೇಳಿದ್ದರು. 
ಕಾಂಗ್ರೆಸ್ ಪಕ್ಷದಲ್ಲಿ ಯುವಕರಿದ್ದು, ಉತ್ತಮ ಅನುಭವಗಳು ದೊರೆಯರಿದೆ. ನಿಮಗೆ ಹೊಸ ಕಾಂಗ್ರೆಸ್ ಪಕ್ಷವನ್ನು ನಾವು ನೀಡುತ್ತಿದ್ದು, ಇದು ದೇಶಕ್ಕೆ ಹೊಸ ದೃಷ್ಟಿಕೋನವಾಗಿರುತ್ತದೆ. ಶೀಘ್ರದಲ್ಲಿಯೇ ನೀವು ಕಾಂಗ್ರೆಸ್ ಪಕ್ಷದಲ್ಲಿ ನಾಟಕೀಯ ಬದಲಾವಣೆಗಳನ್ನು ನೋಡಲಿದ್ದೀರಿ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಉದ್ಯೋಗ ಸೃಷ್ಟಿ, ಶಿಕ್ಷಣ ವ್ಯವಸ್ಥೆ ಬದಲಾವಣೆ ಕುರಿತಂತೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮೂರು ಪ್ರಮುಖ ಅಂಶಗಳ ಆಧಾರದ ಮೇಲೆ ಜಾಗತಿಕ ಆರೋಗ್ಯ ವ್ಯವಸ್ಥೆ ಕುರಿತಂತೆ ಅಭಿವೃದ್ಧಿ ತಂತ್ರಗಳನ್ನು ರೂಪಿಸಲಾಗುತ್ತದೆ ಎಂದಿದ್ದಾರೆ. 

ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡುವಂತೆ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಶೀಘ್ರದಲ್ಲಿಯೇ ಒತ್ತಡ ಹೇರಲಿದೆ. ಅಧಿಕಾರಕ್ಕೆ ಬಂದ ಬಳಿಕ ಖಂಡಿತವಾಗಿಯೂ ನಾವು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವಂತೆ ಮಾಡುತ್ತೇವೆ. ಪಂಚಾಯಿತಿ ಹಂತದಲ್ಲಿ ಈಗಾಗಲೇ ನಮ್ಮಲ್ಲಿ ಮಹಿಳಾ ಮೀಸಲಾತಿಯಿದೆ. ಆದರೆ, ಸಂಸತ್ತಿನಲ್ಲಿ ಇದು ಅಂಗೀಕಾರಗೊಳ್ಳಬೇಕೆಂದು ನಾವು ಬಯಸುತ್ತೇವೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com