ವಿಶ್ವಸಂಸ್ಥೆಯಲ್ಲಿ ಕುಲಭೂಷಣ್ ಜಾದವ್ ಪ್ರಕರಣ ಪ್ರಸ್ತಾಪಿಸಿದ ಪಾಕ್!

ಪಾಕಿಸ್ತಾನ ಉಗ್ರ ಸ್ವರ್ಗವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಿಸಿದ ಬೆನ್ನಲ್ಲೇ ಪಾಕಿಸ್ತಾನ ಕುಲಭೂಷಣ್ ಜಾದವ್ ಪ್ರಕರಣವನ್ನು ಪ್ರಸ್ತಾಪ ಮಾಡುವ ಮೂಲಕ ವಿಷಯಾಂತರಕ್ಕೆ ಪ್ರಯತ್ನಿಸಿದೆ.
ವಿಶ್ವಸಂಸ್ಥೆ
ವಿಶ್ವಸಂಸ್ಥೆ
ವಿಶ್ವಸಂಸ್ಥೆ: ಪಾಕಿಸ್ತಾನ ಉಗ್ರ ಸ್ವರ್ಗವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಿಸಿದ ಬೆನ್ನಲ್ಲೇ ಪಾಕಿಸ್ತಾನ ಕುಲಭೂಷಣ್ ಜಾದವ್ ಪ್ರಕರಣವನ್ನು ಪ್ರಸ್ತಾಪ ಮಾಡುವ ಮೂಲಕ ವಿಷಯಾಂತರಕ್ಕೆ ಪ್ರಯತ್ನಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನ ಕುಲಭೂಷಣ್ ಜಾದವ್ ಪ್ರಕರಣವನ್ನು ಪ್ರಸ್ತಾಪಿಸಿದ್ದು, ಪಾಕಿಸ್ತಾನದ ನಿಲುವಿನ ಕುರಿತು ಮಾತನಾಡುವ ದೇಶಗಳು ಮೊದಲು ತಮ್ಮ ನಿಲುವಿನ ಕುರಿತು  ಆಲೋಚಿಸಬೇಕಿದೆ ಎಂದು ಭಾರತಕ್ಕೆ ಟಾಂಗ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಲಿಹಾ ಲೋಧಿ, ಪಾಕಿಸ್ತಾನದ ನಡೆಗಳನ್ನು ಟೀಕಿಸುವ ದೇಶಗಳು ಮೊದಲು ತಮ್ಮ ದೇಶದ ನೀತಿಗಳನ್ನು  ಪರಿಶೀಲಿಸಿಕೊಳ್ಳಬೇಕಿದೆ. ನಮ್ಮ ದೇಶದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಕುಲಭೂಷಣ್ ಜಾದವ್ ರನ್ನು ನಾವು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಅಂತೆಯೇ ಆಫ್ಘಾನಿಸ್ತಾನದ ವಿರುದ್ಧ ಕಿಡಿಕಾರಿದ ಮಲಿಹಾ ಲೋಧಿ, ಮೊದಲು ಆಫ್ಘಾನಿಸ್ತಾನ ತನ್ನ ಆಂತರಿಕ ಸಮಸ್ಯೆಗಳ ಕುರಿತು ಗಮನ ಕೇಂದ್ರೀಕರಿಸಬೇಕಿದೆ ಎಂದು ಟಾಂಗ್ ನೀಡಿದ್ದಾರೆ.
ಇದಕ್ಕೂ ಮೊದಲು ನಡೆದ ಚರ್ಚೆ ವೇಳೆ ಭಾರತ, ಆಫ್ಘಾನಿಸ್ತಾನ ಮತ್ತು ಅಮೆರಿಕ ದೇಶಗಳ ಪ್ರತಿನಿಧಿಗಳು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದವು. ಪಾಕಿಸ್ತಾನ ಉಗ್ರರ ಸ್ವರ್ಗವಾಗುತ್ತಿದ್ದು, ಮೊದಲು ತನ್ನ ನಿಲುವನ್ನು  ಬದಲಿಸಿಕೊಳ್ಳಬೇಕು. ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ ಕೆಟ್ಟ ಭಯೋತ್ಪಾದನೆ ಎಂಬುದಿಲ್ಲ.. ಭಯೋತ್ಪಾದನೆಯಲ್ಲೂ ಇಂತಹ ದ್ವಿಮಾನದಂಡ ಸರಿಯಲ್ಲ ಎಂದು ಪಾಕಿಸ್ತಾನವನ್ನು ಟೀಕಿಸಿದ್ದವು. ಅಂತೆಯೇ ಈ ಬಗ್ಗೆ  ಪಾಕಿಸ್ತಾನ ಸರ್ಕಾರ ಕಠಿಣ ನಿಲುವು ತಳೆಯಬೇಕು ಎಂದು ಒತ್ತಾಯಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com