ಗಣರಾಜ್ಯೋತ್ಸವ ದಿನದಂದು 'ಆಜಾದ್ ಕಾಶ್ಮೀರ'ಕ್ಕೆ ಲಾರ್ಡ್ ನಾಜಿರ್ ಕರೆ: ಲಂಡನ್'ನಲ್ಲಿ ಘರ್ಷಣೆ

'ಆಜಾದ್ ಕಾಶ್ಮೀರ'ಕ್ಕೆ ಆಗ್ರಹಿಸಿ ಬ್ರಿಟೀಷ್ ಶಾಸಕ ಲಾರ್ಡ್ ನಾಜಿರ್ ಕರಾಳ ದಿನ ಆಚರಿಸಲು ಕರೆ ನೀಡಿದ ಹಿನ್ನಲೆಯಲ್ಲಿ ಲಂಡನ್ ಭಾರತೀಯ ರಾಯಭಾರಿ ಕಚೇರಿ ಬಳಿ ಘರ್ಷಣೆ ಏರ್ಪಟ್ಟಿದೆ ಎಂದು ಶನಿವಾರ ತಿಳಿದುಬಂದಿದೆ...
ಗಣರಾಜ್ಯೋತ್ಸವ ದಿನದಂದು 'ಆಜಾದ್ ಕಾಶ್ಮೀರ'ಕ್ಕೆ ಲಾರ್ಡ್ ನಾಜಿರ್ ಕರೆ: ಲಂಡನ್'ನಲ್ಲಿ ಘರ್ಷಣೆ
ಗಣರಾಜ್ಯೋತ್ಸವ ದಿನದಂದು 'ಆಜಾದ್ ಕಾಶ್ಮೀರ'ಕ್ಕೆ ಲಾರ್ಡ್ ನಾಜಿರ್ ಕರೆ: ಲಂಡನ್'ನಲ್ಲಿ ಘರ್ಷಣೆ
Updated on
ಲಂಡನ್: 'ಆಜಾದ್ ಕಾಶ್ಮೀರ'ಕ್ಕೆ ಆಗ್ರಹಿಸಿ ಬ್ರಿಟೀಷ್ ಶಾಸಕ ಲಾರ್ಡ್ ನಾಜಿರ್ ಕರಾಳ ದಿನ ಆಚರಿಸಲು ಕರೆ ನೀಡಿದ ಹಿನ್ನಲೆಯಲ್ಲಿ ಲಂಡನ್ ಭಾರತೀಯ ರಾಯಭಾರಿ ಕಚೇರಿ ಬಳಿ ಘರ್ಷಣೆ ಏರ್ಪಟ್ಟಿದೆ ಎಂದು ಶನಿವಾರ ತಿಳಿದುಬಂದಿದೆ. 
ಭಾರತದಲ್ಲಿ 69ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಣೆ ಮಾಡಿದ ಬೆನ್ನಲ್ಲೇ ಲಂಡನ್ ನಲ್ಲಿ 'ಆಜಾದ್ ಕಾಶ್ಮೀರ'ಕ್ಕೆ ಆಗ್ರಹಿಸಿ ಕರಾಳ ದಿನ ಆಚರಿಸಲು ಲಾರ್ಡ್ ನಾಜಿರ್ ಕರೆ ನೀಡಿದ್ದರು. ಈ ಪ್ರತಿಭಟನೆಗೆ ಪಾಕಿಸ್ತಾನ ಬೆಂಬಲ ಸೂಚಿಸಿತ್ತು. 
ಇದರಂತೆ ನಿನ್ನೆ ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಬಳಿ ನೂರಾರು ಸಂಖ್ಯೆಯಲ್ಲಿ ಲಾರ್ಡ್ ನಾಜಿರ್ ಪರ ಜನರು ಭಾರತದ ವಿರುದ್ಧ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಇದೇ ಸಂದರ್ಭದಲ್ಲಿ ಭಾರತದ ಪರ ಜನರು ಸ್ಥಳದಲ್ಲಿ ಸೇರಲು ಆರಂಭಿಸಿ, ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಈ ವೇಳೆ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿದೆ ಎಂದು ತಿಳಿದುಬಂದಿದೆ. 
ಘರ್ಷಣೆ ಏರ್ಪಡುತ್ತಿದ್ದಂತೆಯೇ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com