ಕುರಾಶಿಕಿ: ಪಶ್ಚಿಮ ಜಪಾನ್ ನಲ್ಲಿ ಭಾರೀ ಮಳೆಯಿಂದ 100 ಮಂದಿ ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಕಡೆಗಳಲ್ಲಿನ ಪ್ರವಾಹದಿಂದಾಗಿ 87 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಪೈಕಿ 13 ಜನರನ್ನು ಕಂಡುಹಿಡಿಯಲಾಗಿದ್ದು, ಡಜನ್ ಗಿಂತಲೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿ ಯೊಶಿಹಿದಿ ಸುಗಾ ತಿಳಿಸಿದ್ದಾರೆ.
ಸುಮಾರು 2 ಮಿಲಿಯನ್ ನಷ್ಟು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅನೇಕ ಆಡಳಿತಗಾರರು ಭೂ ಕುಸಿತದ ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆ ಸೇರಿದಂತೆ ಕಟ್ಟಡಗಳು ಸ್ವೊಲೆನ್ ನದಿ ನೀರಿನಿಂದ ಆವೃತ್ತಗೊಂಡಿದ್ದು, ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಹಾಗೂ ಬೋಟ್ ಗಳನ್ನು ಮಿಲಿಟರಿ ಸಿಬ್ಬಂದಿ ಬಳಸುತ್ತಿದ್ದಾರೆ.
ಮಾಬಿ ಮೆಮೊರಿಯಲ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳನ್ನು ಜಪಾನ್ ಸೇನಾ ಸಿಬ್ಬಂದಿಗಳು ಬೋಟ್ ಗಳ ಸಹಾಯದಿಂದ ರಕ್ಷಿಸಿದ್ದಾರೆ.
ನಿನ್ನೆ ಮಧ್ಯಾಹ್ನದಿಂದಲೂ 170 ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ 80 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಾರ್ವಜನಿಕ ಪ್ರಸಾರ ಮಾಧ್ಯಮ ಎನ್ ಎಚ್ ಹೆ ತಿಳಿಸಿದೆ.
ಕಳೆದ ರಾತ್ರಿ ವಿದ್ಯುತ್, ನೀರು ಇಲ್ಲದೆ ಕಾಲ ಕಳೆಯುವಂತಾಯಿತು. ಕಗ್ಗತ್ತಲು, ಕೆಟ್ಟ ವಾಸನೆಯಿಂದ ಈಗ ಮುಕ್ತಗೊಂಡಿರುವುದಾಗಿ 79 ವರ್ಷದ ಶಿಗೆಯುಕಿ ಅಸಾನೊ ತಿಳಿಸಿದ್ದಾರೆ.
5 ಲಕ್ಷ ಜನಸಂಖ್ಯೆ ಹೊಂದಿರುವ ಕುರಶಿಕಿ ಮಳೆಯಿಂದಾಗಿ ಅತಿ ಹೆಚ್ಚಿನ ಹಾನಿಗೀಡಾಗಿದ್ದು, 2014ರಲ್ಲಿ ಮಳೆ ಸಂಬಂಧಿತ ಅನಾಹುತಗಳಲ್ಲಿ 77ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. 2004ರಲ್ಲಿ ತೈಪೂನ್ ಚಂಡಮಾರುದಿಂದಾಗಿ 98 ಜನರು ಸಾವನ್ನಪ್ಪಿದ್ದರು.
ಇಂದು ಸಂಜೆಯವರೆಗೂ 2,310 ಸಂತ್ರಸ್ಥರನ್ನು ರಕ್ಷಿಸಲಾಗಿದೆ. ಇನ್ನಿತರರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಎನ್ ಹೆಚ್ ಕೆ ಸುದ್ದಿ ಪ್ರಸಾರ ಮಾಡಿದೆ.