ಷರೀಫ್, ಮರ್ಯಾಮ್ ನವಾಜ್ ಪಾಕ್'ಗೆ ಬರುತ್ತಿದ್ದಂತೆಯೇ ಬಂಧಿಸಲು ಆದೇಶ
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಉಚ್ಛಾಟಿತ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರ್ಯಾಮ್ ನಜಾ ಅವರು ಪಾಕಿಸ್ತಾನಕ್ಕೆ ಬರುತ್ತಿದ್ದಂತೆಯೇ ಬಂಧನಕ್ಕೊಳಪಡಿಸುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ...
ಲಾಹೋರ್; ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಉಚ್ಛಾಟಿತ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರ್ಯಾಮ್ ನಜಾ ಅವರು ಪಾಕಿಸ್ತಾನಕ್ಕೆ ಬರುತ್ತಿದ್ದಂತೆಯೇ ಬಂಧನಕ್ಕೊಳಪಡಿಸುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಪಾಕಿಸ್ತಾನ ಹಿರಿಯ ಸಚಿವರೊಬ್ಬರು, ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರ್ಯಾಮ್ ನವಾಜ್ ಅವರು ಪಾಕಿಸ್ತಾನಕ್ಕೆ ಆಗಮಿಸಿದ ಕೂಡಲೇ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ನಡುವಲ್ಲೇ ಲಾಹೋರ್ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ 6.15ಕ್ಕೆ ಇತ್ತೆಹಾದ್ ವಿಮಾನದ ಮೂಲಕ ಪಾಕಿಸ್ತಾನಕ್ಕೆ ಆಗಮಿಸುವುದಾಗಿ ಮರ್ಯಾಮ್ ತಿಳಿಸಿದ್ದಾರೆ.
ಇಸ್ಲಾಮಾಬಾದ್'ನ ಉತ್ತರದಾಯಿತ್ವ ಕೋರ್ಟ್ ಪನಾಮಾ ಹಗರಣ ಸಂಬಂಧ ನವಾಜ್ ಷರೀಫ್'ಗೆ 10 ವರ್ಷ ಹಾಗೂ ಮರ್ಯಾಮ್'ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.