ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ ಬಲೆಗೆ, ಭಯಾನಕ ವಿಡಿಯೋ!

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಸೆರೆ ಸಿಕ್ಕಿದೆ...
ಮೊಸಳೆ
ಮೊಸಳೆ
ಮೆಲ್ಬರ್ನ್(ಆಸ್ಟ್ರೇಲಿಯಾ): ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಸೆರೆ ಸಿಕ್ಕಿದೆ. 
ಆಸ್ಟ್ರೇಲಿಯಾದ ಕ್ಯಾಥರಿನ್ ನದಿಯಲ್ಲಿ 2010ರಿಂದಲೂ ರೆಂಜ್ ಆಫಿಸರ್ ಗಳು ವಾರ್ಷಿಕವಾಗಿ ಸುಮಾರು 250 ಮೊಸಳೆಗಳನ್ನು ಬಲೆ ಹಾಕಿ ಹಿಡಿಯುತ್ತಿದ್ದರು. 
ಜನರನ್ನು ಮೊಸಳೆಗಳು ಬಲಿ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿದು ಮೊಸಳೆ ಪಾರ್ಕ್ ಗೆ ಸ್ಥಳಾಂತರಿಸಲಾಗುತ್ತದೆ. ಈ ವರ್ಷದಲ್ಲೇ ಒಟ್ಟು 188 ಉಪ್ಪು ನೀರಿನ ಮೊಸಳೆಗಳನ್ನು ಸೆರೆ ಹಿಡಿಯಲಾಗಿದೆ. 
ಸದ್ಯ ಸಿಕ್ಕಿರುವ ಮೊಸಳೆಗೆ 60 ವರ್ಷ ವಯಸ್ಸಾಗಿದೆ. ಬರೋಬ್ಬರಿ 600 ಕೆಜಿ ತೂಕವಿದ್ದು, 4.7 ಮೀಟರ್ ಉದ್ದವಿದೆ. ಇನ್ನು 2011ರಲ್ಲಿ ಸಾಲ್ಟಿ ಹೆಸರಿನ ಮೊಸಳೆ ಬಲೆಗೆ ಬಿದ್ದಿದ್ದು ಇದರ ಉದ್ದ 4.6 ಮೀಟರ್ ಇತ್ತು. ಇದು ಜಗತ್ತಿನ ಎರಡನೇ ದೊಡ್ಡ ಗಾತ್ರದ ಮೊಸಳೆಯಾಗಿದೆ.
ವಿಡಿಯೋ ಕೃಪೆ: ಯೂಟ್ಯೂಬ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com