ಮತ್ತೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಬೇಡ: ಇರಾನ್ ಗೆ ಟ್ರಂಪ್ ಎಚ್ಚರಿಕೆ

ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ತೊಡೆ ತಟ್ಟಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸ ಮಾಡಬೇಡಿ.. ಇಲ್ಲವಾದರೆ ಇತಿಹಾಸದಲ್ಲಿ ಸಂಭವಿಸಿದ ಕೆಲ ಘಟನೆಗಳು ಮತ್ತೆ ಪುನರಾವರ್ತನೆಯಾಗಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
'ನಿಮ್ಮ ಬೆದರಿಕೆ ಮತ್ತು ಅಹಿಂಸೆ ಮತ್ತು ಸಾವಿನ ಕುರಿತ ಬುದ್ದಿವಂತ ಪದಗಳನ್ನು ಸಹಿಸಿಕೊಳ್ಳುವ ದೇಶ ನಮ್ಮದಲ್ಲ. ಎಚ್ಚರಿಕೆ ಮತ್ತೆ ನೀವು ಅಮೆರಿಕಕ್ಕೆ ಬೆದರಿಕೆಯೊಡ್ಡುವ ದುಸ್ಸಾಹಸಕ್ಕೆ ಕೈ ಹಾಕಿದರೆ, ಇತಿಹಾಸ ಪುನರಾವರ್ತನೆಯಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ವಿರುದ್ಧದ ಯುದ್ಧವು ಎಲ್ಲ ಯುದ್ಧಗಳ ತಾಯಿಯಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದ ಅಧ್ಯಕ್ಷ ಹಸನ್ ರೂಹಾನಿ
ಇನ್ನು ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ವಿಶ್ವಸಂಸ್ಥೆಯನ್ನು ಒತ್ತಾಯಿಸಿತ್ತು. ಅಲ್ಲದೆ ಭಾರತ ಸೇರಿದಂತೆ ಹಲವು ದೇಶಗಳು ಇರಾನ್ ನೊಂದಿಗಿನ ವಾಣಿಜ್ಯ ಸಂಬಂಧವನ್ನು ಕಡಿತಗೊಳಿಸಬೇಕು ಎಂದು ಅಮೆರಿಕ ಆಗ್ರಹಿಸಿತ್ತು. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿದ್ದ ಇರಾನ್ ಅಧ್ಯಕ್ಷ ಹಸನ್ ರೂಹಾನಿ, 'ಇರಾನ್ ವಿರುದ್ಧದ ಯುದ್ಧವು ಎಲ್ಲ ಯುದ್ಧಗಳ ತಾಯಿಯಾಗಿರಲಿದೆ ಎಂಬುದನ್ನು ಅಮೆರಿಕ ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com