ಹೊಟ್ಟೆ ನೋವು ಎಂದ ಚೀನಾ ಮಹಿಳೆಯ ಕಿಡ್ನಿಯಲ್ಲಿ 3000 ಕಲ್ಲುಗಳು!

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಕಿಡ್ನಿಯಲ್ಲಿ ಬರೊಬ್ಬರಿ ಸುಮಾರು 3000 ಕಲ್ಲುಗಳು ಕಂಡು ಬಂದ ಘಟನೆ ಚೀನಾದ ಜಿಯಾಂಗ್ಸೌ ಪ್ರಾಂತ್ಯದಲ್ಲಿ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಕಿಡ್ನಿಯಲ್ಲಿ ಬರೊಬ್ಬರಿ ಸುಮಾರು 3000 ಕಲ್ಲುಗಳು ಕಂಡು ಬಂದ ಘಟನೆ ಚೀನಾದ ಜಿಯಾಂಗ್ಸೌ ಪ್ರಾಂತ್ಯದಲ್ಲಿ ವರದಿಯಾಗಿದೆ.
ಜಿಯಾಂಗ್ಸೌ ಪ್ರಾಂತ್ಯದ ಚಾಂಗ್ಝೌ ವುಜಿನ್ ಪೀಪಲ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಕಿಡ್ನಿಯಲ್ಲಿದ್ದ ಎಲ್ಲಾ ಕಲ್ಲುಗಳನ್ನು ಹೊರತೆಗೆಯಲಾಗಿದೆ. 
ಮೂಲಗಳ ಪ್ರಕಾರ ಕಳೆದ ವಾರ ಹೊಟ್ಟೆನೋವು, ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಹಿಳೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಈ ವೇಳೆ ಮಹಿಳೆಯ ಕಿಡ್ನಿಯಲ್ಲಿ ಕಲ್ಲುಗಳಿರುವುದು ಪತ್ತೆಯಾಗಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸುಮಾರು 3 ಗಂಟೆಗೂ ಅಧಿಕ ಸಮಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬೆಚ್ಚಿ ಬಿದ್ದಿದ್ದು, ಮಹಿಳೆಯ ಕಿಡ್ನಿಯ ತುಂಬ ಬರೀ ಕಲ್ಲುಗಳೇ ತುಂಬಿತ್ತು. ಕೂಡಲೇ ಆ ಕಲ್ಲುಗಳನ್ನು ವೈದ್ಯರು ಹೊರ ತೆಗೆದಿದ್ದಾರೆ.
ಇನ್ನು ಹೀಗೆ ಹೊರತೆಗೆದ ಕಲ್ಲುಗಳ ಸಂಖ್ಯೆ ಬರೊಬ್ಬರಿ 2,980 ಕಲ್ಲುಗಳಿದ್ದವಂತೆ. ಹೊರತೆಗೆದ ಕಲ್ಲುಗಳನ್ನು ಎಣಿಸಲೇ ವೈದ್ಯರಿಗೆ ಸುಮಾರು 1 ಗಂಟೆ ಕಾಲ ಬೇಕಾಯಿತಂತೆ. 
ಗಿನ್ನೆಸ್ ದಾಖಲೆ ಪುಟ ಸೇರಿದ್ದ ಭಾರತದ ಮಹಿಳೆಯ ಕಿಡ್ನಿಯಲ್ಲಿತ್ತು 1,72,155 ಕಲ್ಲುಗಳು!
ಇನ್ನು ಪ್ರಸ್ತುತ ಚೀನಾ ಮಹಿಳೆಯ ಕಿಡ್ನಿಯಲ್ಲಿದ್ದ ಸುಮಾರು 3 ಸಾವಿರ ಕಲ್ಲುಗಳೇ ಅಧಿಕ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈ ಹಿಂದೆ ಇದಕ್ಕಿಂತಲೂ 100 ಪಟ್ಟು ಹೆಚ್ಚು ಕಲ್ಲುಗಳು ಕಿಡ್ನಿಯಲ್ಲಿದ್ದ ದಾಖಲೆ ಭಾರತದ ವ್ಯಕ್ತಿಯೊಬ್ಬರ ಹೆಸರಲ್ಲಿದೆ. 2010ರಲ್ಲಿ ಮಹಾರಾಷ್ಟ್ರದ ಧನರಾಜ್ ವಾಡಿಲೆ ಎಂಬುವವರ ಕಿಡ್ನಿಯಲ್ಲಿದ್ದ ಬರೊಬ್ಬರಿ  1,72,155 ಕಲ್ಲುಗಳನ್ನು ವೈದ್ಯರು ಹೊರತೆಗೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com