ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತ; ಅಮೆರಿಕದ ಮಹತ್ವದ ನಡೆ

ಮಹತ್ವದ ಬೆಳವಣಿಗೆಯಲ್ಲಿ ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಅಮೆರಿಕ ಸರ್ಕಾರ ಭಾರತವನ್ನು ಸೇರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಅಮೆರಿಕ ಸರ್ಕಾರ ಭಾರತವನ್ನು ಸೇರಿಸಿದೆ.
ಭಾರತಕ್ಕೆ ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಮಾರಾಟ ಮಾಡಲು ರಷ್ಯಾ, ಫ್ರಾನ್ಸ್, ಜಪಾನ್ ನಂತಹ ದೈತ್ಯ ರಾಷ್ಟ್ರಗಳು ಪೈಪೋಟಿ ತೋರುತ್ತಿದ್ದು,. ಇದರ ನಡುವೆಯ ತನ್ನ ಪ್ರಮುಖ ರಕ್ಷಣಾ ಗ್ರಾಹಕನಾಗಿರುವ ಭಾರತವನ್ನು ಅಮೆರಿಕ ಸರ್ಕಾರ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಆ ಮೂಲಕ ಭಾರತಕ್ಕೆ ತನ್ನ ಅತ್ಯುನ್ನತ ರಕ್ಷಣಾ ಪರಿಕರಗಳನ್ನು ಮಾರಾಟ ಮಾಡಲವು ಮುಂದಾಗಿದೆ.
ಈಗಾಗಲೇ ಭಾರತ ಸರ್ಕಾರ ಅಮೆರಿಕದೊಂದಿಗೆ ಎಂ777 ಹೊವಿಟ್ಡರ್ ಫಿರಂಗಳು, ಅತ್ಯಾಧುನಿಕ ಡ್ರೋಣ್ ಗಳು ಮತ್ತು ವಿಧ್ವಂಸಕ ಆಪಾಚೆ ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಇವುಗಳು ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ.
ಇದರ ನಡುವೆಯೇ ಭಾರತವನ್ನು ಮತ್ತಷ್ಟು ಆಪ್ತವಾಗಿಸಿಕೊಳ್ಳಲು ಅಮೆರಿಕ ಸರ್ಕಾರ ಮುಂದಾಗಿದ್ದು, ಇದೇ ಕಾರಣಕ್ಕೆ ಭಾರತವನ್ನು ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಆ ಮೂಲಕ ಭಾರತಕ್ಕೆ ತನ್ನ ಅತ್ಯಾಧುನಿಕ ರಕ್ಷಣಾ ಪರಿಕರಗಳನ್ನು ಮಾರಾಟ ಮಾಡಲು ಮುಂದಾಗಿದೆ. 
ಈ ಬಗ್ಗೆ ಮಾತನಾಡಿರುವ, ಅಮೆರಿಕ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಅವರು, ಭಾರತವನ್ನು ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿ (Strategic Trade Authorization-1-STA-1)ಗೆ ಸೇರಿಸಿರುವುದು ಖುಷಿಯ ವಿಚಾರ. ಭಾರತ ಎಂದಿಗೂ ಅಮೆರಿಕದ ಅತ್ಯಾಪ್ತ ರಾಷ್ಟ್ರಗಳ ಪಟ್ಟಿಯರುತ್ತದೆ. ಉಭಯ ದೇಶಗಳ ನಡುವಿನ ವಾಣಿಜ್ಯ ಮತ್ತು ರಕ್ಷಣಾ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ವೃದ್ಧಿಸುತ್ತದೆ ಎಂದು ಹೇಳಿದರು.
\

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com