ಇಸ್ಲಾಮಾಬಾದ್: ಭಾರತದೊಡನೆ ಯುದ್ಧ ನಡೆಸಲು ಪಾಕ್ ಗೆ ಯಾವ ಅವಕಾಶವಿಲ್ಲ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಎರಡೂ ಪರಮಾಣು ರಾಷ್ಟ್ರಗಳಾಗಿದ್ದು ಸಹ ಪಾಕ್ ಶಾಂತಿಯನ್ನು ಬಯಸುತ್ತದೆ, ಆದರೆ ಇದನ್ನು ದೌರ್ಬಲ್ಯವೆಂದು ತಿಳಿಯಬಾರದು ಎಂದಿದೆ.
ಪಾಕಿಸ್ತಾನ ಸೇನಾ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ನ ಮಹಾ ನಿರ್ದೇಶಕ ಮೇ.ಜ. ಅಸೀಫ್ ಗಫೂರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದು 2018 ರ ಆರಂಭದಿಂದ ಇಂದಿನವರೆಗೆ ಭಾರತ 1,077 ಬಾರಿ ಕದನ ವಿರಾಮ ಉಲ್ಲಂಘನೆ ನಡೆಸಿದೆ ಎಂದು ಆರೋಪಿಸಿದ್ದಾರೆ.
"ನಮ್ಮ ಸೇನೆ ಶಾಂತಿಯನ್ನು ಬಯಸುತ್ತದೆ. ಆದರೆ ಅದನ್ನು ದೌರ್ಬಲ್ಯ ಎಂದು ಭಾವಿಸಬೇಕಾಗಿಲ್ಲ" ಗಫೂರ್ ಹೇಳಿದ್ದಾರೆ. "ರಾಜತಾಂತ್ರಿಕತೆ ವಿಫಲವಾದಾಗ ಯುದ್ಧ ಸಂಭವಿಸಲಿದೆ. ಎರಡೂ ರಾಷ್ಟ್ರಗಳು ಸಮಸ್ಯೆ ಕುರಿತ್ಂದೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕು. ಆದರೆ ಭಾರತ ಮಾತುಕತೆಯಿಂದ ಹಿಂದೆ ಸರಿಯುತ್ತಿದೆ.
"ಭಾರತೀಯರು ಏನಾಗಬೇಕೆಂದು ಬಯಸುತ್ತಾರೆ ಎನ್ನುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಎರಡೂ ರಾಷ್ಟ್ರಗಳು ಪರಮಾಣು ಶಕ್ತಿ ಹೊಂದಿವೆ. ಆದರೆ ಯುದ್ಧಕ್ಕೆ ಯಾವ ಅವಕಾಶವಿಲ್ಲ." ಅವರು ಹೇಳಿದ್ದಾರೆ.
2003 ರ ಕದನ ವಿರಾಮದ ಒಪ್ಪಂದಕ್ಕೆ ಬದ್ದವಾಗಿರಬೇಕೆಂದು ಕಳೆದ ವಾರವಷ್ಟೇ ಎರಡೂ ರಾಷ್ಟ್ರಗಳ ಸೇನಾಪಡೆಗಳು ಒಪ್ಪಂದ ಮಾಡಿಕೊಂಡಿದ್ದರಿಂದ ಪಾಕಿಸ್ತಾನವು ಭಾರತೀಯ ಸೇನೆಗೆ ಪ್ರತ್ಯುತ್ತರ ನೀಡಲಿಲ್ಲ ಆದರೆ ದಾಳಿಯಿಂಡ ನಾಗರಿಕರು ಸಾವನ್ನಪ್ಪಿದ್ದರೆ ಆಗ ಸೇನೆ ಪ್ರತ್ಯುತ್ತರ ನೀಡುವುದು ಅನಿವಾರ್ಯವಾಗಲಿದೆ.
ಭಾರತ ಮೊದಲು ಗುಂಡು ಹಾರಿಸಿದರೆ ಮತ್ತು ಅದರಿಂದ ಯಾವ ಹಾನಿ ಸಂಭವಿಸದಿದ್ದರೆ ನಾವು ಪ್ರತಿಕ್ರಯಿಸುವುದಿಲ್ಲ. ಒಂದು ವೇಳೆ ಭಾರತ ಎರಡನೇ ಬಾರಿ ಗುಂಡು ಹಾರಿಸಿದರೆ ಆಗ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಗಫೂರ್ ಹೇಳಿದ್ದಾರೆ.
ಭಾನುವಾರ ಭಾರತೀಯ ಸೇನೆ ಗಡಿಯುದ್ಧಕ್ಕೆ ನಡೆಸಿದ ಶೆಲ್ ದಾಳಿಯಲ್ಲಿ ಓರ್ವ ಮಹಿಳೆ, ಒಬ್ಬ ಹುಡುಗಿ ಕೊಲ್ಲಲ್ಪಟ್ಟರೆ ನಾಲ್ವರು ಮಕ್ಕಳು, 8 ಮಹಿಳೆಯರು ಸೇರಿ 24 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಪಾಕಿಸ್ತಾನ, ತಾನು ಹಳೆಯ ಒಪ್ಪಂದಕ್ಕೆ ಬದ್ದವಾಗಿರಲು ಬಯಸಿರುವುದಾಗಿ ಅವರು ಹೇಳಿದ್ದಾರೆ.