ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಭಾರತದಿಂದ 5 ಮಿಲಿಯನ್ ಡಾಲರ್ ನೆರವು

ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸಹಾಯ ಮಾಡುವ ವಿಶ್ವಸಂಸ್ಥೆಗೆ ಸಂಬಂಧಿಸಿದ ಏಜೆನ್ಸಿಗೆ ಭಾರತ 5 ಮಿಲಿಯನ್ ಡಾಲರ್ ನೆರವು ನೀಡುವ ಭರವಸೆ ನೀಡಿದೆ.
ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಭಾರತದಿಂದ 5 ಮಿಲಿಯನ್ ಡಾಲರ್ ನೆರವು
ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಭಾರತದಿಂದ 5 ಮಿಲಿಯನ್ ಡಾಲರ್ ನೆರವು
ವಿಶ್ವಸಂಸ್ಥೆ: ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸಹಾಯ ಮಾಡುವ ವಿಶ್ವಸಂಸ್ಥೆಗೆ ಸಂಬಂಧಿಸಿದ ಏಜೆನ್ಸಿಗೆ  ಭಾರತ 5 ಮಿಲಿಯನ್ ಡಾಲರ್ ನೆರವು ನೀಡುವ ಭರವಸೆ ನೀಡಿದೆ. 
ಅಮೆರಿಕ ತನ್ನ ಕೊಡುಗೆಯಲ್ಲಿ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್ ನಿರಾಶ್ರಿತರಿಗೆ ಸಹಾಯ ಮಾಡುವುದಕ್ಕೆ ಕೊರತೆ ಎದುರಾಗಿತ್ತು. ಈ ಬೆನ್ನಲ್ಲೇ ಭಾರತ 5 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.  ಯುಎನ್ಆರ್ ಡಬ್ಲ್ಯೂಎ ಸಂಸ್ಥೆ ಪ್ಯಾಲೆಸ್ತೀನ್ ನ ನಿರಾಶ್ರಿತರಿಗೆ ಸಹಾಯ ಮಾಡುವ ಸಂಸ್ಥೆಯಾಗಿದೆ. 
ವಿಶ್ವಸಂಸ್ಥೆಯ ಪ್ರಕಾರ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಸಂಸ್ಥೆಗೆ 250 ಮಿಲಿಯನ್ ಡಾಲರ್ ಕೊರತೆ ಉಂಟಾಗಿದೆ. ಯುಎನ್ಆರ್ ಡಬ್ಲ್ಯೂಎ ಗೆ ನೀಡುತ್ತಿರುವೆ ನೆರವನ್ನು ಕಡಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ತಿಳಿಸಿದ್ದರು. ಯುಎನ್ಆರ್ ಡಬ್ಲ್ಯೂಎ ನ ಬಜೆಟ್ ಗೆ ವಾಸ್ತವದಲ್ಲಿ 3000 ಮಿಲಿಯನ್ ಡಾಲರ್ ಕೊರತೆ ಎದುರಾಗಿತ್ತು, ವಾಷಿಂಗ್ ಟನ್ ನಿಂದ 356 ಮಿಲಿಯನ್ ಡಾಲರ್ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇವಲ 65 ಮಿಲಿಯನ್ ನೀಡಿದ್ದು 300 ಮಿಲಿಯನ್ ಡಾಲರ್ ಕೊರತೆ ಎದುರಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com