ಸಂತ್ರಸ್ಥರ ನೆರವಿಗೆ ಸರ್ಕಾರವಿದೆ: ಮೇರಿಲ್ಯಾಂಡ್ ಶೂಟೌಟ್ ಕುರಿತು ಅಧ್ಯಕ್ಷ ಟ್ರಂಪ್ ಟ್ವೀಟ್

ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್ ನಲ್ಲಿನ ಪತ್ರಿಕಾ ಕಚೇರಿ ಮೇಲಿನ ಶೂಟೌಟ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮೇರಿಲ್ಯಾಂಡ್ ಶೂಟೌಟ್
ಮೇರಿಲ್ಯಾಂಡ್ ಶೂಟೌಟ್
ವಾಷಿಂಗ್ಟನ್: ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್ ನಲ್ಲಿನ ಪತ್ರಿಕಾ ಕಚೇರಿ ಮೇಲಿನ ಶೂಟೌಟ್ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಶೂಟೌಟ್ ನಲ್ಲಿ ಸಾವನ್ನಪ್ಪಿದ ಮತ್ತು ಗಾಯಾಳುಗಳ ಕುಟುಂಬದೊಂದಿಗೆ ಅಮೆರಿಕ ಸರ್ಕಾರವಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂತೆಯೇ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಕೋರುತ್ತೇಮೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿ ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ ಪೊಲೀಸರಿಗೂ ಟ್ರಂಪ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 
ಅಮೆರಿಕದ ಮೇರಿಲ್ಯಾಂಡ್ ರಾಜಧಾನಿ ಅನ್ನಾಪೋಲಿಸ್ ನ ಗೆಜೆಟ್ ಪತ್ರಿಕಾ ಕಚೇರಿ ಮೇಲೆ ಶಸ್ತ್ರಧಾರಿಯೋರ್ವ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಕಚೇರಿಯಲ್ಲಿದ್ದ ಐವರು ಸಿಬ್ಬಂದಿಗಳು ಗುಂಡೇಟಿನಿಂದ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದರು. ಶಸ್ತ್ರಧಾರಿಯನ್ನು ಪ್ರಸ್ತುತ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com