ಇರಾನ್ ನ ಅಣ್ವಸ್ತ್ರ ಯೋಜನೆ ಮೇಲೆ ಶಾಶ್ವತ ನಿರ್ಬಂಧ ಹೇರಬೇಕು: ಅಮೆರಿಕ ಆಗ್ರಹ

ಇರಾನ್ ನ ಅಣ್ವಸ್ತ್ರ ಯೋಜನೆಗಳ ಕುರಿತು ಕೆಂಗಣ್ಣು ಬೀರಿರುವ ಅಮೆರಿಕ ಸರ್ಕಾರ ಇದೀಗ ಇರಾನ್ ನ ಅಣ್ವಸ್ತ್ರ ಯೋಜನೆಗಳ ಮೇಲೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ವಾಷಿಂಗ್ಟನ್: ಇರಾನ್ ನ ಅಣ್ವಸ್ತ್ರ ಯೋಜನೆಗಳ ಕುರಿತು ಕೆಂಗಣ್ಣು ಬೀರಿರುವ ಅಮೆರಿಕ ಸರ್ಕಾರ ಇದೀಗ ಇರಾನ್ ನ ಅಣ್ವಸ್ತ್ರ ಯೋಜನೆಗಳ ಮೇಲೆ ಶಾಶ್ವತ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಮೆರಿಕ ಸರ್ಕಾರದ ಕಾರ್ಯದರ್ಶಿ ಮೈಕೆಲ್ ಆರ್ ಪೊಂಪೆಯೊ ಅವರು, ಇರಾನ್ ಮೇಲೆ ಶಾಶ್ವತ ಅಣ್ವಸ್ತ್ರ ಯೋಜಮೆ ನಿರ್ಬಂಧ ಹೇರಬೇಕು. ಆ ದೇಶದೊಂದಿಗೆ ಯಾವುದೇ ದೇಶಗಳು ರಕ್ಷಣಾ ಸಾಮಗ್ರಿಗಳ ವಹಿವಾಟು ಸಂಪರ್ಕ ಇಟ್ಟುಕೊಳ್ಳಬಾರದು. ಪ್ರಮುಖವಾಗಿ ಆ ದೇಶದಿಂದ ಕ್ಷಿಪಣಿಗಳ ಆಮದು ರಫ್ತು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಕಳೆದ ಸಾಕಷ್ಟು ವರ್ಷಗಳಿಂದ ಇರಾನ್ ರಹಸ್ಯವಾಗಿ ಅಣ್ವಸ್ತ್ರ ಯೋಜನೆಯನ್ನು ಮುನ್ನಡೆಸಿಕೊಂಡು ಬಂದಿದೆ. ಇದು ಇಡೀ ಜಗತ್ತಿಗೆ ಅಪಾಯಕಾರಿ. ಅಣ್ವಸ್ತ್ರ ನಿಶ್ಯಸ್ತ್ರೀಕರಣದ 50ನೇ ವಾರ್ಷಿಕೋತ್ಸವದಲ್ಲಿರುವ ನಾವು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಈ ಸಂಬಂಧ ಇರುವ ನೀತಿ ನಿರೂಪಣೆಗಳನ್ನು ಮತ್ತಷ್ಟು ಕಠಿಣಗೊಳಿಸಬೇಕು. ಈ ಸಂಬಂಧ ಇರಾನ್ ಮತ್ತು ಉತ್ತರ ಕೊರಿಯಾದಿಂದ ಎದುರಾಗುತ್ತಿರುವ ಸವಾಲುಗಳಿಗೆ ತಕ್ಕ ಉತ್ತರ ನೀಡಲೇಬೇಕು ಎಂದು ಹೇಳಿದ್ದಾರೆ.
ಅಂತೆಯೇ ಇರಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಇರಾನ್ ಜನತೆ ತಮ್ಮ ದೇಶದ ಸರ್ಕಾರದ ಭ್ರಷ್ಟಾಚಾರದಿಂದ ನಲುಗುತ್ತಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿನಿತ್ಯ ಪ್ರತಿಭಟನೆಗಳು ಆ ಸಕ್ಕಾರದ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಆ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಪ್ರತಿಭಟನಾಕಾರರ ಬಂಧನ, ಕಿರುಕುಳ ಮತ್ತು ಭದ್ರತಾ ಸಿಬ್ಬಂದಿಗಳ ದುರ್ಬಳಕೆ ಮಾಡಿಕೊಂಡು ಹಲ್ಲೆ ಮಾಡುತ್ತಿದೆ ಎಂದು ಪೊಂಪೆಯೊ ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಅಣ್ವಸ್ತ್ರ ಯೋಜನೆ ಸಂಬಂಧ ಇರಾನ್ ವಿರುದ್ಧ ಕಿಡಿಕಾರಿದ್ದ ಅಮೆರಿಕ, ಭಾರತಕ್ಕೆ ಆ ದೇಶದಿಂದ ತೈಲ ಆಮದು ಮಾಡಿಕೊಳ್ಳದಂತೆ ಆಗ್ರಹಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com