ಇಸ್ರೇಲ್ ಗೆ ಏರ್ ಇಂಡಿಯಾ ವಿಮಾನ: ತನ್ನ ವಾಯುಮಾರ್ಗ ಬಳಕೆಗೆ ಸೌದಿ ಅರೇಬಿಯಾ ಅನುಮತಿ

ಇಸ್ರೆಲ್ ಗೆ ತೆರಾಳುವ ಏರ್ ಇಂಡಿಯಾ ವಿಮಾನ ತನ್ನ ದೇಶದ ವಾಯುಮಾರ್ಗ ಬಳಕೆ ಮಾಡಿಕೊಳ್ಳುವುದಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಏರ್ ಇಂಡಿಯಾ
ಏರ್ ಇಂಡಿಯಾ
Updated on: 
ವಾಷಿಂಗ್ ಟನ್: ಇಸ್ರೆಲ್ ಗೆ ತೆರಾಳುವ ಏರ್ ಇಂಡಿಯಾ ವಿಮಾನ ತನ್ನ ದೇಶದ ವಾಯುಮಾರ್ಗ ಬಳಕೆ ಮಾಡಿಕೊಳ್ಳುವುದಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ. 
ಸೌದಿ ಅರೇಬಿಯಾ ಅಥವಾ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಪ್ರಕತವಾಗಬೇಕಿದೆ. ಆದರೆ ಅಮೆರಿಕ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು  ಈ ಬಗ್ಗೆ ಈಗಾಗಲೇ ಘೋಷಣೆ ಮಾಡಿದ್ದಾರೆ. ಸೌದಿ ಅರೇಬಿಯಾ ಇಸ್ರೇಲ್ ನ್ನು ಗುರುತಿಸುವುದೇ ಇಲ್ಲ. ಈಗ 70 ವರ್ಷಗಳ ನಂತರ ಏರ್ ಸ್ಪೇಸ್ ನಿಷೇಧವನ್ನು ತೆರವುಗೊಳಿಸಿದ್ದು, ಇಸ್ರೇಲ್ ಹಾಗೂ ಸೌದಿ ಅರೇಬಿಯಾ ನಡುವಿನ ದ್ವಿಪಕ್ಷೀಯ ಸಂಬಂಧದ ಸುಧಾರಣೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ. 
ಇಸ್ರೇಲ್ ನ ಟೆಲ್‌ಅವೀವ್‌ ಗೆ ಭಾರತದಿಂದ ವಾರದಲ್ಲಿ ಮೂರು ದಿನ ವಿಮಾನ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕಳೆದ ತಿಂಗಳು ಏರ್ ಇಂಡಿಯಾ ಘೋಷಿಸಿತ್ತು ಆದರೆ ಇಸ್ರೇಲ್ ತಲುಪುವುದಕ್ಕೆ ಸೌದಿ ಅರೇಬಿಯಾ ಮೂಲಕ ಹಾದು ಹೋಗಬೇಕಿದ್ದು, ತನ್ನ ವೈಮಾನಿಕ ಮಾರ್ಗವನ್ನು ಬಳಕೆ ಮಾಡುವುದಕ್ಕೆ ಏರ್ ಇಂಡಿಯಾಗೆ ಸೌದಿ ಅರೇಬಿಯಾ ಅನುಮತಿ ನೀಡಿರಲಿಲ್ಲ.  ಈಗ ಇಸ್ರೇಲ್ ನಿಂದ ಭಾರತಕ್ಕೆ ಇರುವ ವೈಮಾನಿಕ ಸಂಪರ್ಕ ಸೌದಿ ಅರೆಬಿಯಾ ವಾಯುಮಾರ್ಗ ಬಳಸದೇ ಎಥಿಯೋಪಿಯಾ ಮೂಲಕ ಭಾರತ ಪ್ರವೇಶಿಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com