ಡೊಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು: ಚೀನಾ

ಡೊಕ್ಲಾಮ್ ವಿಚಾರವಾಗಿ ಮತ್ತೊಮ್ಮೆ ಚೀನಾ ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಡೊಕ್ಲಾಮ್ ತನ್ನದು, ಡೋಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು ಎಂದು ಚೀನಾ ಹೇಳಿದೆ.
ಡೊಕ್ಲಾಮ್
ಡೊಕ್ಲಾಮ್
ಬೀಜಿಂಗ್: ಡೊಕ್ಲಾಮ್ ವಿಚಾರವಾಗಿ ಮತ್ತೊಮ್ಮೆ ಚೀನಾ ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ಡೊಕ್ಲಾಮ್ ತನ್ನದು, ಡೋಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತಿರಬೇಕು ಎಂದು ಚೀನಾ ಹೇಳಿದೆ. 
ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ಭಾರತೀಯ ರಾಯಭಾರಿ ಅಧಿಕಾರಿ ಆರೋಪ ಮಾಡಿದ್ದ ಕೆಲವೇ ದಿನಗಳ ನಂತರ ಚೀನಾ ಈ ಹೇಳಿಕೆ ನೀಡಿದ್ದು, ಡೊಕ್ಲಾಮ್ ಚೀನಾಗೆ ಸೇರಿದ್ದು ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ  ಹುವಾ ಚುನೈಯಿಂಗ್ ಹೇಳಿಕೆ ನೀಡಿದ್ದಾರೆ.  ಡೊಕ್ಲಾಮ್ ನಲ್ಲಿ ಚಟುವಟಿಕೆ ನಡೆಸುವುದು ಚೀನಾದ ಹಕ್ಕು, ಯಥಾ ಸ್ಥಿತಿಯನ್ನು ಬದಲಾವಣೆ ಮಾಡುವಂಥಹದ್ದೇನಿಲ್ಲ ಎಂದು ಚೀನಾ ವಕ್ತಾರರು ಹೇಳಿದ್ದಾರೆ. 
ಇದೇ ವೇಳೆ ಚೀನಾದ ರಾಜತಾಂತ್ರಿಕ ನಡೆಯಿಂದಾಗಿ ಡೊಕ್ಲಾಮ್ ವಿವಾದ ಬಗೆಹರಿಯಿತು ಎಂದು ಚೀನಾ ಹೇಳಿಕೊಂಡಿದೆ. ಚೀನಾ ಮತ್ತೊಮ್ಮೆ ಭಾರತ-ಚೀನಾ ಗಡಿ ಪ್ರದೇಶದಲ್ಲಿ ಯಥಾ ಸ್ಥಿತಿಯನ್ನು ಬದಲಾವಣೆ ಮಾಡಲು ಯತ್ನಿಸಿದರೆ ಮತ್ತೊಂದು ಡೊಕ್ಲಮ್ ವಿವಾದ ಸಂಭವಿಸುತ್ತದೆ ಎಂದು ಭಾರತದ ರಾಯಭಾರಿ ಅಧಿಕಾರಿ ಗೌತಮ್ ಬಂಬಾವಾಲೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಪ್ರತಿಕ್ರಿಯೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com