ಕಿಮ್ ಜಾಂಗ್ ಉನ್ ಭೇಟಿ, ಉತ್ತರ ಕೊರಿಯಾದೊಂದಿಗೆ ಚೀನಾ ಸಂಬಂಧ ಮತ್ತಷ್ಟು ಗಟ್ಟಿ

ಅಧಿಕಾರಕ್ಕೆ ಏರಿದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿದೇಶ ಪ್ರವಾಸ ಮಾಡಿದ್ದು, ತನ್ನ ಪರಮಾಪ್ತ ರಾಷ್ಟ್ರ ಚೀನಾಗೆ ಕಿಮ್ ಭೇಟಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಅಧಿಕಾರಕ್ಕೆ ಏರಿದ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿದೇಶ ಪ್ರವಾಸ ಮಾಡಿದ್ದು, ತನ್ನ ಪರಮಾಪ್ತ ರಾಷ್ಟ್ರ ಚೀನಾಗೆ ಕಿಮ್ ಭೇಟಿ ನೀಡಿದ್ದಾರೆ.
ಒಟ್ಟು ನಾಲ್ಕು ದಿನಗಳ ಕಾಲ ಕಿಮ್ ಜಾಂಗ್ ಉನ್ ಚೀನಾ ಪ್ರವಾಸ ಕೈಗೊಂಡಿದ್ದರು. ಆದರೆ ಈ ಭೇಟಿಯನ್ನು ಚೀನಾ ಸರ್ಕಾರ ರಹಸ್ಯವಾಗಿಟ್ಟಿತ್ತು. ಆದರೆ ಇದೀಗ ಮಾಧ್ಯಮಗಳಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಸ್ವತಃ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಈ ಬಗ್ಗೆ ಮಾತನಾಡಿದ್ದು, ಕಳೆದ ಭಾನುವಾರದಿಂದ ಬುಧವಾರದವರೆಗೂ ಕಿಮ್ ಚೀನಾ ಪ್ರವಾಸ ಕೈಗೊಂಡಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಕಿಮ್ ಭೇಟಿಯಿಂದಾಗಿ ಚೀನಾ ಮತ್ತು ಉತ್ತರ ಕೊರಿಯಾ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ತಮ್ಮ ಭೇಟಿ ಕುರಿತು ಮಾತನಾಡಿರುವ ಕಿಮ್ ಜಾಂಗ್ ಉನ್, ಕ್ಸಿ ಜಿನ್ ಪಿಂಗ್ ರೊಂದಿಗಿನ ಭೇಟಿ ಸಂತಸ ತಂದಿದೆ. ಭೇಟಿಯಿಂದಾಗಿ ಚೀನಾ ಮತ್ತು ಉತ್ತರ ಕೊರಿಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.  ನಮ್ಮ ಆಯಾ ದೇಶೀಯ ಪರಿಸ್ಥಿತಿ, ಕೊರಿಯಾದ ಪೆನಿನ್ಸುಲಾದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಇತರೆ ಸಮಸ್ಯೆಗಳ ಕುರಿತು ಭೇಟಿ ವೇಳೆ ಚರ್ಚಿಸಲವಾಗಿದೆ ಎಂದು ಕಿಮ್ ತಿಳಿಸಿದರು.
ಅಂತೆಯೇ ಕ್ಸಿ ಜಿನ್ ಪಿಂಗ್ ಅವರೂ ಕೂಡ ಉತ್ತರ ಕೊರಿಯಾಗೆ ಭೇಟಿ ನೀಡುವಂತೆ ಕಿಮ್ ಆಹ್ವಾನ ನೀಡಿದ್ದು, ಕ್ಸಿ ಜಿನ್ ಪಿಂಗ್ ಆಹ್ವಾನ ಸ್ವೀಕರಿಸಿದ್ದು, ಶೀಘ್ರ ಅವರು ಉತ್ತರ ಕೋರಿಯಾಕ್ಕೆ ಭೇಟಿ ನೀಡಲಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಸಿದ್ಧ ಎಂದು ಉನ್ ಹೇಳಿಕೆ ನೀಡಿದ್ದು ಮತ್ತು ಟ್ರಂಪ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ನಡೆದ ಚೀನಾ ಭೇಟಿಯ ಬೆಳವಣಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com