ಉಭಯ ರಾಷ್ಟ್ರಗಳೂ ಪರಸ್ಪರ ಮುಖ್ಯ ನೆರೆ ರಾಷ್ಟ್ರಗಳಾಗಿದ್ದು, ಸಮಾನ ಉದ್ದೇಶ, ಅಭಿವೃದ್ಧಿಯ ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ರಾಷ್ಟ್ರಗಳಾಗಿವೆ ಎಂದು ಚೀನಾ ಹೇಳಿದೆ. ನೇಪಾಳ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ ಎಂಬ ನೂತನ ಪ್ರಧಾನಿ ಕೆ.ಪಿ ಶರ್ಮ ಓಲಿ ಅವರ ಹೇಳಿಕೆಯನ್ನು ಸ್ವಾಗತಿಸಿರುವ ಚೀನಾ, ನೇಪಾಳ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವುದು ಶ್ಲಾಘನೀಯ ನೇಪಾಳದ ನೆರೆ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧ ಬೆಳೆಸಿಕೊಳ್ಳುವುದನ್ನು ಚೀನಾ ಸ್ವಾಗತಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್ ಹೇಳಿದ್ದಾರೆ.