ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅಮೆರಿಕಾದ ಹಿರೋ : ಟ್ರಂಪ್ ಬಣ್ಣನೆ

ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಗಗನಯಾತ್ರಿ ಆಗಬೇಕೆನ್ನುವ ಮಿಲಿಯನ್ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದು, ಅಮೆರಿಕಾದ ಹಿರೋ ಆಗಿದ್ದಾರೆ ಎಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ

ವಾಷಿಂಗ್ಟನ್ :  ಬಾಹ್ಯಾಕಾಶ ಸಂಬಂಧಿತ ಕಾರ್ಯಕ್ರಮಗಳಿಗಾಗಿ ತನ್ನ ಜೀವವನ್ನೇ  ಬಲಿದಾನ ಮಾಡಿದ್ದ ಭಾರತೀಯ ಮೂಲದ ಕಲ್ಪನಾ  ಚಾವ್ಲಾ, ಗಗನಯಾತ್ರಿ ಆಗಬೇಕೆನ್ನುವ ಮಿಲಿಯನ್  ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದು, ಅಮೆರಿಕಾದ ಹಿರೋ ಆಗಿದ್ದಾರೆ ಎಂದು  ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಮೇ ತಿಂಗಳನ್ನು ಏಷಿಯನ್ ಅಮೆರಿಕನ್ ಹಾಗೂ ಫೆಸಿಪಿಕ್ ದ್ವಿಪರಾಷ್ಟ್ರಗಳ  ಪಾರಂಪರಿಕ ತಿಂಗಳು ಎಂದು ಘೋಷಿಸಿದ ನಂತರ ಕೇಳಿಬಂದಿದ್ದ ಟೀಕೆಗಳಿಗೆ ಟ್ರಂಪ್ ಉತ್ತರಿಸಿದ್ದಾರೆ.  ಪ್ರತಿವರ್ಷ ಮೇ ತಿಂಗಳನ್ನು ಏಷಿಯನ್ , ಫೆಸಿಪಿಕ್ ಅಮೆರಿಕನ್ ಪಾರಂಪರಿಕ ತಿಂಗಳಾಗಿ ಅಮೆರಿಕಾ ಗೊತ್ತುಪಡಿಸಿದೆ.

ಕಲ್ಪನಾ ಚಾವ್ಲಾ ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿಯಾಗಿದ್ದಾರೆ. 2003ರಲ್ಲಿ ಕೊಲಂಬಿಯಾದ ಬಾಹ್ಯಾಕಾಶ ನೌಕೆಯಲ್ಲಿ ಮೃತಪಟ್ಟಿದ್ದ ಏಳುಮಂದಿಯಲ್ಲಿ ಕಲ್ಪನಾ ಚಾವ್ಲಾ ಕೂಡಾ ಒಬ್ಬರಾಗಿದ್ದಾರೆ.

ಭಾರತೀಯ ಮೂಲಕ ಅಮೆರಿಕಾ ನಿವಾಸಿ ಕಲ್ಪನಾ ಚಾವ್ಲಾ , ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಬಾಹ್ಯಾಕಾಶ ಸಂಬಂಧಿತ ಕಾರ್ಯಕ್ರಮ, ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕು ಸಾಗಣೆ ಕಾರ್ಯಚಾರಣೆ ಮೂಲಕ ಆಕೆ ಅಮೆರಿಕಾದ ಹಿರೋ ಆಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

 ಕಲ್ಪನಾ ಚಾವ್ಲಾ ಸಾಧನೆಗಾಗಿ ಹಲವು ಪ್ರತಿಷ್ಠಿತ  ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಗಗನಯಾತ್ರಿ ಆಗಬೇಕೆನ್ನುವ ಮಿಲಿಯನ್  ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ  ಸೆಲೆಯಾಗಿದ್ದಾರೆ.  ಕಲ್ಪನಾ ಚಾವ್ಲಾ ಅವರ ರಾಷ್ಟ್ರಪ್ರೇಮದಿಂದಾಗಿ ಅಮೆರಿಕಾ ಅನೇಕ ಅವಿಷ್ಕಾರ ಹಾಗೂ  ಸಾಮಾಜಿಕ ಪ್ರಗತಿ ಸಾಧಿಸುವಂತಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಸುಮಾರು 20 ಮಿಲಿಯನ್  ಏಷ್ಯಾ- ಅಮೆರಿಕ ಮತ್ತು ಫೆಸಿಪಿಕ್ ದ್ವಿಪರಾಷ್ಟ್ರಗಳು ಅಮೆರಿಕಾವನ್ನು ತಮ್ಮ ತವರು ರಾಷ್ಟ್ರ ಎಂದು ಭಾವಿಸಿದ್ದು, ದೇಶದಲ್ಲಿ  ಮೌಲ್ಯಾಧಾರಿತ ಶ್ರಮ, ಪ್ರಾಮಾಣಿಕತೆ, ಸ್ವಾತಂತ್ರ್ಯ ಹಾಗೂ ಸಂತೋಷ ಇರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com