ಹಡಗುಗಳು ಹಾಗೂ ನಾವಿಕರು ರಷ್ಯಾದಿಂದ ಉಕ್ರೇನ್ ಗೆ ಹಿಂತಿರುಗಿಲ್ಲ ಎನ್ನುವುದನ್ನು ನಾನು ಅರಿತಿರುವೆ. ಈ ಅಂಶವನ್ನಾಧರಿಸಿ ಅರ್ಜಂಟೈನಾದಲ್ಲಿ ರಷ್ಯಾ ಅಧ್ಯಕ್ಷರೊಡನೆ ನನ್ನ ಭೇಟಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇನೆ. ಇದು ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ಸಮ್ಮತವೆಂದು ನಾನು ಭಾವಿಸುವೆ, ಸಧ್ಯದ ಪರಿಸ್ಥಿತಿ ತಿಳಿಯಾದ ತಕ್ಷಣ ನಾವು ಮತ್ತೆ ಭೇಟಿಯಾಗುವವರಿದ್ದೇವೆ ಎನ್ನುವುದು ನನ್ನ ಆಶಯ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.