ಮಾಹಿತಿ ಸೋರಿಕೆ: ಗೂಗಲ್ ಪ್ಲಸ್ ಸೇವೆ ಬಂದ್ ಮಾಡಲು ಇಂಟರ್ನೆಟ್ ದೈತ್ಯ ಸಂಸ್ಥೆ ಘೋಷಣೆ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿಂದ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆಯಾದ ಬೆನ್ನಲ್ಲೇ ಗೂಗಲ್ ಪ್ಲಸ್ ನಿಂದಲೂ ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಿಂದ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆಯಾದ ಬೆನ್ನಲ್ಲೇ ಗೂಗಲ್ ಪ್ಲಸ್ ನಿಂದಲೂ ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಪ್ಲಸ್ ಸೇವೆ ಬಂದ್ ಮಾಡುವುದಾಗಿ ಇಂಟರ್ನೆಟ್ ದೈತ್ಯ ಸಂಸ್ಥೆ ಗೂಗಲ್ ಘೋಷಣೆ ಮಾಡಿದೆ. 
ಪೇಸ್ ಬುಕ್'ಗೆ ಪೈಪೋಟಿ ನೀಡುವ ಸಲುವಾಗಿ ಆರಂಭಿಸಲಾಗಿದ್ದ ಗೂಗಲ್ ಪ್ಲಸ್ ನಲ್ಲಿ ಕಾಣಿಸಿಕೊಂಡ ಬಗ್ ನಿಂದಾಗಿ ಮಾಹಿತಿ ಸೋರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸೇವೆಯನ್ನು ಸೋಮವಾರದಿಂದ ಬಂದ್ ಮಾಡುತ್ತಿರವುದಾಗಿ ಗೂಗಲ್ ತಿಳಿಸಿದೆ. 
ಗೂಗಲ್ ಪ್ಲಸ್ ನಿರ್ವಹಣೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದರಿಂದ ಮತ್ತು ಜನರು ಇದನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿದ್ದರಿಂದ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೂಗಲ್ ವಕ್ತಾರರರು ತಿಳಿಸಿದ್ದಾರೆ. 
ಮಾರ್ಚ್ ತಿಂಗಳಿನಲ್ಲಿಯೇ ಗೂಗಲ್ ಪ್ಲಸ್ ಸಾಫ್ಟ್'ವೇರ್ ನಲ್ಲಿ ಬಗ್ ಇರುವುದು ಗೂಗಲ್ ಕಂಪನಿಗೆ ತಿಳಿದಿತ್ತು. ಆದರೆ, ನಿಯಂತ್ರಕ ಸಂಸ್ಥೆಗಳ ಭಯದಿಂದ ಹೊರಜಗತ್ತಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com