ಅಮೆರಿಕಾದಲ್ಲಿ ಬೃಹತ್ ಕಾಲ್ ಸೆಂಟರ್ ಹಗರಣ; ಭಾರತೀಯ ಮೂಲದವರು ಸೇರಿ 15 ಮಂದಿ ಬಂಧನ

ಲಕ್ಷಾಂತರ ಡಾಲರ್ ಮೊತ್ತದ ಬೃಹತ್ ಕಾಲ್ ಸೆಂಟರ್ ಹಗರಣದಲ್ಲಿ ಭಾರತೀಯ ಮೂಲದವರು ಸೇರಿದಂತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕಾಗೊ: ಲಕ್ಷಾಂತರ ಡಾಲರ್ ಮೊತ್ತದ ಬೃಹತ್ ಕಾಲ್ ಸೆಂಟರ್ ಹಗರಣದಲ್ಲಿ ಭಾರತೀಯ ಮೂಲದವರು ಸೇರಿದಂತೆ 15 ಮಂದಿಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ. ಅಮೆರಿಕಾ ನಾಗರಿಕರಿಗೆ ಲಕ್ಷಾಂತರ ಡಾಲರ್ ವಂಚಿಸಿದ ಆರೋಪ ಇವರ ಮೇಲೆ ಕೇಳಿಬಂದಿದೆ.
ಕಳೆದ ಗುರುವಾರ ಈ ಸಂಬಂಧ ಅಮೆರಿಕಾದಲ್ಲಿ 7 ಮಂದಿಯನ್ನು ಬಂಧಿಸಲಾಗಿದ್ದು 2 ಸಾವಿರಕ್ಕೂ ಅಧಿಕ ಅಮೆರಿಕಾ ನಾಗರಿಕರಿಗೆ ಸುಮಾರು 55 ಲಕ್ಷ ಡಾಲರ್ ವಂಚಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮೊಹಮ್ಮದ್ ಕಜೀಮ್ ಮೊಮಿನ್, ಪಲಕ್ ಕುಮಾರ್ ಪಟೇಲ್, ಮೊಹಮ್ಮದ್ ಸೊಝಬ್ ಮೊಮಿನ್, ರೊಡ್ರಿಗೊ ಲಿಯೊನ್ ಕಾಸ್ಟಿಲ್ಲೊ, ಡೇವಿನ್ ಬ್ರಾಡ್ ಫೊರ್ಡ್ ಪೊಪ್, ನಿಕೊಲಸ್ ಅನೆಸಾಂಡರ್ ಡಿಯಾನೆ, ನಿಕೋಲಸ್ ಅಲೆಜಾಂಡರ್ ಡೀನ್, ಡ್ರು ಕೈಲ್ ರಿಗ್ಗಿನ್ಸ್, ಮತ್ತು ಜಾಂಟ್ಜ್ ಪ್ಯಾರಿಶ್ ಮಿಲ್ಲರ್ ಅವರನ್ನು ಬಂಧಿಸಲಾಗಿದ್ದು ನಿನ್ನೆ ಅಮೆರಿಕ ನ್ಯಾಯಾಧೀಶ ಜಾನೆಟ್ ಎಫ್ ಕಿಂಗ್ ಮುಂದೆ ವಿಚಾರಣೆಗೆ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಭಾರತದಲ್ಲಿ ಏಳು ಮಂದಿ ಮತ್ತು 5 ಕಾಲ್ ಸೆಂಟರ್ ಗಳ ವಿರುದ್ಧ ದೂರು ಸಲ್ಲಿಸಲಾಗಿದೆ.

ಈ ದೋಷಾರೋಪಣೆ ಮತ್ತು ನಿನ್ನೆಯ ಬಂಧನ ಇಂತಹ ಫೋನ್ ಹಗರಣಗಳ ಹಿಂದೆ ಮರೆಮಾಚಲು ಯತ್ನಿಸುವವರನ್ನು ಬಂಧಿಸುವಲ್ಲಿ ಇಲಾಖೆ ಮತ್ತು ಅಧಿಕಾರಿಗಳ ಬದ್ಧತೆಯನ್ನು ತೋರಿಸುತ್ತದೆ ಎಂದು ಅಮೇರಿಕಾದ ಅಟಾರ್ನಿ ಬಂಗ್ ಜೆ ಪಾಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com