ನೈಜಿರಿಯಾದಲ್ಲಿ ಭೀಕರ ಪ್ರವಾಹ :100 ಸಾವು !

ನೈಜಿರಿಯಾದ 10 ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹದ ಅಬ್ಬರಕ್ಕೆ ಸಿಲುಕಿ 100 ಮಂದಿ ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ ಎಂದು ದೇಶದ ಪ್ರಮುಖ ಪರಿಹಾರ ಸಂಸ್ಥೆ ಇಂದು ತಿಳಿಸಿದೆ.
ನೈಜಿರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ
ನೈಜಿರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ

ಲೊಕೊಜಾ: ನೈಜಿರಿಯಾದ 10 ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹದ ಅಬ್ಬರಕ್ಕೆ ಸಿಲುಕಿ 100 ಮಂದಿ ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ ಎಂದು ದೇಶದ ಪ್ರಮುಖ ಪರಿಹಾರ ಸಂಸ್ಥೆ  ಇಂದು ತಿಳಿಸಿದೆ.

ಭಾರಿ ಮಳೆಯಿಂದಾಗಿ ನೈಜಿರ್ ಮತ್ತು ಬೆನ್ಯೂ ನದಿಯ ದಂಡೆಗಳು ಕೊಚ್ಚಿಹೋಗಿದ್ದು, ಸಹಸ್ರಾರು ಜನರು ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

 ಕೊಗಿ, ಡೆಲ್ಟಾ, ಅನಾಂಬ್ರಾ ಮತ್ತು ನೈಜಿರ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ  ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಏಜಿನ್ಸಿ ಅಧಿಕಾರಿ ಸಾನಿ ದಾಟ್ಟಿ ಹೇಳಿದ್ದಾರೆ. ಇನ್ನಿತರ  ಎಂಟು ರಾಜ್ಯಗಳಲ್ಲಿ ಪರಿಸ್ಥಿತಿ ಗಮನ ಹರಿಸಲಾಗುತ್ತಿದೆ. ಈ ಎಲ್ಲಾ ರಾಜ್ಯಗಳು ಪ್ರವಾಹದಿಂದ ಬಾಧಿತವಾಗಿದೆ ಎಂದು ಹೇಳಿದ್ದಾರೆ.

ಕೊಗಿ ಲೊಕೊಜಾದ ರಾಜಧಾನಿಯಾಗಿದ್ದು, ಎರಡೂ ನದಿಗಳ ಸಂಗಮದಲ್ಲಿದೆ. ಪ್ರವಾಹದಿಂದಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ಸಾಕಷ್ಟು ಹಾನಿಯಾಗಿದೆ. 2012ರಲ್ಲಿ ಉಂಟಾಗಿದ್ದ ಪ್ರವಾಹದಂತೆ ಈ ಬಾರಿ ಭೀಕರ ಪ್ರವಾಹ ಉಂಟಾಗಿದ್ದು, ನೈಜಿರಿಯಾದ 36 ರಾಜ್ಯಗಳ  ಪೈಕಿ 30 ರಾಜ್ಯಗಳಲ್ಲಿ ಸುಮಾರು ಎರಡು ಮಿಲಿಯನ್ ನಷ್ಟು ಜನರು ಮನೆ , ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಪರಿಹಾರ ಸಲಕರಣೆಗಳು ಹಾಗೂ ಔಷದೋಪಚಾರಕ್ಕಾಗಿ  8.3 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ನೈಜಿರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com