ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಮುಂದುವರಿಕೆ ಕಷ್ಟ: ಚೀನಾ ಹೇಳಿಕೆ

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಸುಧಾರಣೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಚೀನಾ ಸ್ಪಷ್ಟವಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧ ಸುಧಾರಣೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಚೀನಾ ಸ್ಪಷ್ಟವಾಗಿ ಹೇಳಿದೆ.
ಚೀನಾ ಮತ್ತು ಅಮೆರಿಕ ವಾಣಿಜ್ಯ ಬಿಕ್ಕಟ್ಟು ತಾರಕಕ್ಕೇರಿದ್ದು, ಚೀನಾ ನಿರ್ಮಿತ ವಸ್ತುಗಳ ಮೇಲೆ ಅಮೆರಿಕ ಸರ್ಕಾರ ಸುಂಕ ಹೆಚ್ಚಿಸಿರುವಂತೆಯೇ ಚೀನಾ ಕೂಡ ಅಮೆರಿಕ ವಸ್ತುಗಳ ಮೇಲಿನ ತನ್ನ ಸುಂಕವನ್ನು ಹೆಚ್ಚಿಸಿತ್ತು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ವಿರುದ್ಧ ತೊಡೆ ತಟ್ಟಿನಿಂತಿರುವ ಚೀನಾ ಅಮೆರಿಕದೊಂದಿಗೆ ಬಾಂಧವ್ಯ ಸುಧಾರಣೆ ಸಂಬಂಧ ಚರ್ಚೆ ಸಾಧ್ಯವಿಲ್ಲ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಚೀನಾ ವಿತ್ತ ಸಚಿವಾಲಯ ಸಹಾಯಕ ಸಚಿವ ವ್ಯಾಂಗ್ ಶೌವೆನ್ ಅವರು, ಬೆದರಿಕೆ ತಂತ್ರಗಾರಿಕೆ ಮೂಲಕ ಅಮೆರಿಕ ವ್ಯಾಪಾರ ಮಾಡಲು ನೋಡುತ್ತಿದೆ. ಆದರೆ ಅದು ಸಾಧ್ಯವಿಲ್ಲ. ಚೀನಾ ಮೇಲಿನ ನಿರ್ಬಂಧಗಳು ಅಮೆರಿಕಕ್ಕೇ ಮುಳುವಾಗುತ್ತವೆ. ಇಂತಹ ಬೆದರಿಕೆ ತಂತ್ರಗಾರಿಕೆಗೆ ನಾವು ಬಗ್ಗುವುದಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಅಮೆರಿಕದೊಂದಿಗೆ ವಾಣಿಜ್ಯ ವಹಿವಾಟು ಮುಂದುವರೆಸುವ ಕುರಿತು ಮಾತುಕತೆ ಸಾಧ್ಯವಿಲ್ಲ
ಪ್ರಸ್ತುತ ಪರಿಸ್ಥಿತಿಯಲ್ಲಿ ಅಮೆರಿಕದೊಂದಿದೆ ಮಾತುಕತೆ ಸಾಧ್ಯವಿಲ್ಲ. ಆದರೆ ಚೀನಾ ಕಾದು ನೋಡಲಿದೆ. ಯಾರೋ ಒಬ್ಬರು ಕಚೇರಿಯಲ್ಲಿ ಕುಳಿತು ಚೀನಾದೊಂದಿಗಿನ ಎಲ್ಲ ವಾಣಿಜ್ಯ ಸಂಬಂಧ ವ್ಯರ್ಥ ಎಂದು ಹೇಳಲು ಸಾಧ್ಯವಿಲ್ಲ. ಸೈನೋ-ಯುಎಸ್ ಒಪ್ಪಂದಕ್ಕೆ ಅಮೆರಿಕ ಗೌರವ ನೀಡಬೇಕು. 
ಒಪ್ಪಂದದ ಹೊರತಾಗಿಯೂ ಅಮೆರಿಕ ಏಕೆ ಇಂತಹ ನಿರ್ಧಾರ ಕೈಗೊಂಡಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.  ಅಮೆರಿಕ ನಿರ್ಧಾರದಿಂದಾಗಿ ಎಲ್ ಎನ್ ಜಿ ರಫ್ತುದಾರರಿಗೆ ಖಂಡಿತಾ ಭಾರಿ ಪೆಟ್ಟು ಬೀಳುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶೌವೆನ್ ಗ್ಲೋಬಲ್ ಟೈಮ್ಸ್ ಬರೆದಿರುವ ಸಂಪಾದಕೀಯದಲ್ಲೂ ಸುದೀರ್ಧ ಲೇಖನ ಬರೆದು ಅಮೆರಿಕ ಕ್ರಮವನ್ನು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com