ನಿನ್ನೆಯಷ್ಟೇ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅದರ ಮುಂದುವರೆದ ಭಾಗ ಎಂಬಂತೆ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಈನಂ ಗಂಭೀರ್ ಕೂಡ ಪಾಕಿಸ್ತಾನದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಕಳೆದ ಆಗಸ್ಟ್ ತಿಂಗಳ ಬಳಿಕ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನಾವು ನವ ಪಾಕಿಸ್ತಾನ ಎಂಬ ಪದ ಕೇಳುತ್ತಿದ್ದೇವೆ. ಆದರೆ ಈಗ ನಮಗೆ ಮನವರಿಕೆಯಾಗಿದ್ದು, ಬದಲಾಗಿರುವುದು ಕೇವಲ ಹೆಸರಷ್ಟೇ. ಆದರೆ ಛಾಳಿಯಲ್ಲ. ಇದು ಹೊಸ ಮುಖವಾಡದ ಹಳೆಯ ಪಾಕಿಸ್ತಾನ ಎಂದು ಹೇಳಿದ್ದಾರೆ.