ಶ್ರೀಲಂಕಾ ಉಗ್ರ ದಾಳಿ: 158ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, ಸತ್ತವರಲ್ಲಿ 35 ಮಂದಿ ವಿದೇಶಿಗರು!

ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸತ್ತವರ ಸಂಖ್ಯೆ 156ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಪೈಕಿ 35 ಮಂದಿ ವಿದೇಶಿಗರು ಎಂದು ತಿಳಿದುಬಂದಿದೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಕೊಲಂಬೋ: ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸತ್ತವರ ಸಂಖ್ಯೆ 158ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಪೈಕಿ 35 ಮಂದಿ ವಿದೇಶಿಗರು ಎಂದು ತಿಳಿದುಬಂದಿದೆ.
ಈ ಬಗ್ಗೆ ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದ್ದು, ಶ್ರೀಲಂಕಾದ ಒಟ್ಟು ಎಂಟು ಕಡೆ ಸರಣಿ ಸ್ಫೋಟ ನಡೆದಿದ್ದು, ಈ ಪೈಶಾಚಿಕ ಕೃತ್ಯವನ್ನುಐಸಿಸ್​ ಉಗ್ರರು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಸಾವು, ನೋವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಈ ವರೆಗೂ ಸಾವಿಗೀಡಾದವರ ಸಂಖ್ಯೆ 158ಕ್ಕೆ ಏರಿಕೆಯಾಗಿದೆ. ಅಂತೆಯೇ ಸಾವಿಗೀಡಾದವರ ಪೈಕಿ 35 ಮಂದಿ ವಿದೇಶಿಗರೂ ಇದ್ದಾರೆ ಎಂದು ವರದಿ ಮಾಡಿದೆ.
ಅಂತೆಯೇ ಸತ್ತ ವಿದೇಶಿಗರು ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಈ ಬಗ್ಗೆ ರಾಜಧಾನಿ ಕೊಲಂಬೋದಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು ಶ್ರೀಲಂಕಾ ಪೊಲೀಸರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ ಚರ್ಚ್ ಗಳ ಮೇಲಿನ ದಾಳಿ ಕುರಿತು 10 ದಿನಗಳ ಹಿಂದೆಯೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದ ವಿಚಾರವನ್ನೂ ಎಎಫ್ ಪಿ ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಈಸ್ಟರ್ ಭಾನುವಾರದ ದಿನವಾದ ಇಂದು (ಏ. 21)ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 137 ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿ,  300ಕ್ಕೂ  ಮಂದಿ ಗಾಯಗೊಂಡಿದ್ದಾರೆ. ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ನಲ್ಲಿ ಸ್ಪೋಟ ಸಂಬವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ  ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com