ಲಂಡನ್: 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿದ ಮಾಡೆಲ್ ಒಬ್ಬಳು ಕೊನೆಗೆ ಯಾರೂ ಸರಿ ಹೊಂದಲಿಲ್ಲ ಎಂದು ನಾಯಿಯೊಂದನ್ನು ಮದುವೆಯಾಗಿರುವ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಲಂಡನ್ ಮೂಲದ ಮಾಡೆಲ್ 49 ವರ್ಷದ ಎಲಿಜಬೆತ್ ಹುಡ್ ಎಂಬಾಕೆ ನೂರಾರು ಯುವಕರ ಜೊತೆ ಡೇಟ್ ನಡೆಸಿದ್ದಳು. ಇವರಲ್ಲಿ ಯಾರು ತನ್ನ ಕೋರಿಕೆಗೆ ಹತ್ತಿರವಾದವರಲ್ಲ ಎಂದು ಕೊನೆಗೆ ತನ್ನ 6 ವರ್ಷದ ಸಾಕು ನಾಯಿಯನ್ನೇ ವಿವಾಹವಾಗಿದ್ದಾಳೆ.
ಇಲ್ಲಿ ಮತ್ತೊಂದು ವಿಶೇಷ ಘಟನೆಯೆಂದರೆ ಎಲಿಜಬೆತ್ ಮದುವೆ ಟಿವಿಯಲ್ಲಿ ಪ್ರಸಾರವಾಗಿದ್ದು ಜಗತ್ತಿನಾದ್ಯಂತ ಹಲವು ಮಂದಿ ಮದುವೆಗೆ ಸಾಕ್ಷಿಯಾಗಿದ್ದರು.
ಎಲಿಜಬೆತ್ ಅವರು ಡೇಟಿಂಗ್ ವೆಬ್ ಸೈಟ್ ಮೂಲಕ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದರು. ಎಲಿಜಬೆತ್ ಗೆ ಯಾರು ಷರತ್ತು ಹಾಕದ ಪ್ರೇಮಿ ಬೇಕಾಗಿತ್ತು. ಯಾರೂ ಮೆಚ್ಚುಗೆಗೆ ಪಾತ್ರವಾಗದ ಕಾರಣ ವಿಧಿ ಇಲ್ಲದೆ ತನ್ನ ನಾಯಿಯನ್ನೇ ಮದುವೆಯಾಗಿದ್ದಾಳೆ.