ಭಾರತದಲ್ಲಿನ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದ ಪಾಕಿಸ್ತಾನಕ್ಕೆ ತೀವ್ರ ಬೆದರಿಕೆ- ಇಮ್ರಾನ್ ಖಾನ್ 

ದೇಶದಲ್ಲಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಭಾರತ ಸುಳ್ಳು ಧ್ವಜ ಕಾರ್ಯಚಾರಣೆ ಕೈಗೊಳ್ಳುವ ಮಾತುಗಳನ್ನಾಡುತ್ತಿದೆ. ಇಂತಹ ಕ್ರಮಗಳ ವಿರುದ್ಧ ಸೂಕ್ತ ಪ್ರತ್ಯುತ್ತರ ನೀಡಲಾಗುವುದು  ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್ :ದೇಶದಲ್ಲಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಭಾರತ ಸುಳ್ಳು ಧ್ವಜ ಕಾರ್ಯಚಾರಣೆ ಕೈಗೊಳ್ಳುವ ಮಾತುಗಳನ್ನಾಡುತ್ತಿದೆ. ಇಂತಹ ಕ್ರಮಗಳ ವಿರುದ್ಧ ಸೂಕ್ತ ಪ್ರತ್ಯುತ್ತರ ನೀಡಲಾಗುವುದು  ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿದ್ದಾರೆ.

ಮೋದಿ ಸರ್ಕಾರದಡಿಯಲ್ಲಿ ಭಾರತ ಪ್ಯಾಸಿಸ್ಟ್ ಸಿದ್ದಾಂತದೊಂದಿಗೆ ಹಿಂದೂ ರಾಷ್ಟ್ರ ಕಡೆಗೆ ಸಾಗುತ್ತಿದೆ ಎಂದು ಇಮ್ರಾನ್ ಖಾನ್ 
ಸರಣಿ ಟ್ವೀಟ್ ಮಾಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯೊಂದಿಗೆ ಬಹುತ್ವ ಭಾರತ ಬಯಸುವವರು ಪ್ರತಿಭಟನೆಗೆ ಇಳಿದಿದ್ದು, ಇದು ಆಂದೋಲನವಾಗಿ ರೂಪುಗೊಳ್ಳುತ್ತಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದ ಬಗ್ಗೆ ಹೇಳಿದ್ದಾರೆ. 

ಭಾರತದಿಂದ ಪಾಕಿಸ್ತಾನದ ಮೇಲಿನ ಬೆದರಿಕೆ ಕೂಡಾ ಹೆಚ್ಚಾಗಿದೆ. ಎಲ್ ಒಸಿ ಪರಿಸ್ಥಿತಿ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್  ರಾವತ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸುಳ್ಳು ಧ್ವಜ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನ ಕಳವಳಗೊಂಡಿರುವುದಾಗಿ ಹೇಳಿದ್ದಾರೆ.

ಕಾಶ್ಮೀರ ಮತ್ತು ಎನ್ ಒಸಿಯಲ್ಲಿನ ಪರಿಸ್ಥಿತಿ ಯಾವಾಗ ಬೇಕಾದರೂ ಮುಕ್ತಗೊಳ್ಳಬಹುದು, ಯಾವಾಗ ಬೇಕಾದರೂ ಸೂಕ್ತ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ರಾವತ್ ಬುಧವಾರ ಹೇಳಿಕೆ ನೀಡಿದ್ದರು.  ಆದರೆ, ಪಾಕಿಸ್ತಾನಕ್ಕೆ ಪರ್ಯಾಯ ಮಾರ್ಗವಿಲ್ಲ, ಆದರೆ, ಭಾರತದಿಂದ ಯಾವುದೇ ಆಫರೇಷನ್ ನಡೆದರೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಇದಕ್ಕೂ ಮುನ್ನಾ ಜನರಲ್ ಬಿಪಿನ್ ರಾವತ್ ಹೇಳಿಕೆ ದೇಶೀಯ ಸಮಸ್ಯೆಗಳಿಂದ ಜಾಗತಿಕ ಸಮುದಾಯದ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಘಾಪೂರ್ ಹೇಳಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com