ಅಪ್ರಾಪ್ತ ಬಾಲಕರ ಅಪಹರಣ, ರೇಪ್, ಇರಾನಿ ಸಲಿಂಗಿ ವ್ಯಕ್ತಿಗೆ ಸಾರ್ವಜನಿಕವಾಗಿ ನೇಣು!

ಇಬ್ಬರು ಅಪ್ರಾಪ್ತ ಬಾಲಕರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪದ ಮೇಲೆ ಇರಾನಿನ ಸಲಿಂಗಕಾಮಿಗೆ ಸಾರ್ವಜನಿಕವಾಗಿ ನೇಣು ಹಾಕಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಇಬ್ಬರು ಅಪ್ರಾಪ್ತ ಬಾಲಕರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಆರೋಪದ ಮೇಲೆ ಇರಾನಿನ ಸಲಿಂಗಕಾಮಿಗೆ ಸಾರ್ವಜನಿಕವಾಗಿ ನೇಣು ಹಾಕಲಾಗಿದೆ. 
ಇರಾನ್ ನ ಕಾಜೇರೂನ್ ನಲ್ಲಿ 31 ವರ್ಷದ ವ್ಯಕ್ತಿಗೆ ಸಾರ್ವಜನಿಕವಾಗಿ ನೇಣು ಹಾಕಲಾಗಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಜನವರಿ 10ರಂದು ಆರೋಪಿ ಇಬ್ಬರು ಅಪ್ರಾಪ್ತ ಬಾಲಕರನ್ನು ಕರೆದೊಯ್ದು ಅತ್ಯಾಚಾರ ನಡೆಸಿರುವ ಆರೋಪ ಸಾಬೀತಾಗಿದ್ದು ಈ ಹಿನ್ನೆಲೆಯಲ್ಲಿ ಆತನಿಗೆ ನೇಣು ಶಿಕ್ಷೆಗೆ ಆದೇಶಿಸಲಾಗಿತ್ತು. 
ಇರಾನ್ ನಲ್ಲಿ ಸಲಿಂಗಕಾಮಕ್ಕೆ ನಿಷೇಧವಿದ್ದು ಸಲಿಂಗಿ ಮದುವೆಗೆ ಅವಕಾಶವಿಲ್ಲ. ಸಲಿಂಗಕಾಮ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ವ್ಯಕ್ತಿಗೆ ನೇಣು ಹಾಕಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com