ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಜೆಇಎಂ ಕುರಿತ ಹೇಳಿಕೆ ತೀರ್ಪು ಅಲ್ಲ- ಚೀನಾ

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯ ಕುರಿತ ಹೇಳಿಕೆ ತೀರ್ಪು ಅಲ್ಲ ಎಂದು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರ ಚೀನಾ ಹೇಳುವ ಮೂಲಕ ಮತ್ತೆ ತನ್ನ ಮೊಂಡು ವಾದ ಪ್ರದರ್ಶಿಸಿದೆ.
ಮಸೂದ್ ಅಜರ್
ಮಸೂದ್ ಅಜರ್

ಬೀಜಿಂಗ್ : ಪುಲ್ವಾಮಾ ಉಗ್ರರ ದಾಳಿಯಲ್ಲಿ ಜೈಶ್ ಇ ಮೊಹ್ಮದ್  ಸಂಘಟನೆ  ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರ ಖಂಡನೆ ವ್ಯಕ್ತವಾಗಿದ್ದರೂ, ಪಾಕಿಸ್ತಾನ ಮೂಲದ  ಉಗ್ರ ಸಂಘಟನೆಯ ಕುರಿತ ಹೇಳಿಕೆ ತೀರ್ಪು ಅಲ್ಲ ಎಂದು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರ ಚೀನಾ ಹೇಳುವ ಮೂಲಕ ಮತ್ತೆ ತನ್ನ ಮೊಂಡು ವಾದ ಪ್ರದರ್ಶಿಸಿದೆ.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ  ಜೈಶ್ -ಇ -ಮೊಹಮ್ಮದ್ ಸಂಘಟನೆ ನಡೆಸಿದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 40 ಅರಸೇನಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಅಮಾನುಷ ಘಟನೆಗೆ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಉಗ್ರರ ಹೇಯ ಹಾಗೂ ಹೇಡಿ ಕೃತ್ಯಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುರುವಾರ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದರ ಹೊಣೆಯನ್ನು ಜೈಶ್ ಇ ಮೊಹ್ಮದ್ ಹೊತ್ತುಕೊಂಡಿದೆ ಎಂದು ವಿಶ್ವಸಂಸ್ಛೆಯ ಹೇಳಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿತ್ತು.

ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿರುವ ಜೆಇಎಂ ಸಂಘಟನೆ ಕುರಿತು ವಿಶ್ವಸಂಸ್ಥೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ಗೆಂಗ್ ಶುಂಗ್, ಭೀಕರ ದಾಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಚೀನಾ ಸೂಕ್ಷ್ಮವಾಗಿ ಹತ್ತಿರದಿಂದ ಗಮನಿಸುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿನ್ನೆ  ಜೆಇಎಂ ಸಂಘಟನೆ ಬಗ್ಗೆ ನೀಡಿರುವ ಹೇಳಿಕೆ ಸಾಮಾನ್ಯವಾದದ್ದು ಆದರೆ, ಇದು ತೀರ್ಪು  ಅಲ್ಲ ಎಂದು ಹೇಳಿದ್ದಾರೆ.

ಜೆಇಎಂ ಮುಖ್ಯಸ್ಥ  ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಬೇಕೆಂದು ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಿದ್ದರೂ ಚೀನಾ ಪದೇ ಪದೇ ಅಡ್ಡಗಾಲು ಹಾಕುವ ಮೂಲಕ ಮಿತ್ರ ರಾಷ್ಟ್ರ ಪಾಕಿಸ್ತಾನ ಮೇಲಿನ ದೋಷಾರೋಪವನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ದೇಶಗಳೂ ಕೂಡ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾಪ ಮಂಡಿಸುವುದಾಗಿ ಘೋಷಣೆ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com