ಪರಮಾಪ್ತ ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು

ಪಾಕಿಸ್ತಾನವನ್ನು ಸಾರ್ವಕಾಲಿಕ ಪರಮಾಪ್ತ ರಾಷ್ಟ್ರ ಎಂದು ಗುರುತಿಸಿರುವ ಚೀನಾ, ಈಗ ತನ್ನ ಮಿತ್ರನಿಗೆ ಕೈಕೊಟ್ಟಿದೆ.
ಪರಮಾಪ್ತ ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು
ಪರಮಾಪ್ತ ಪಾಕಿಸ್ತಾನಕ್ಕೆ ಕೈಕೊಟ್ಟ ಚೀನಾ, ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು
ನವದೆಹಲಿ: ಪಾಕಿಸ್ತಾನವನ್ನು ಸಾರ್ವಕಾಲಿಕ ಪರಮಾಪ್ತ ರಾಷ್ಟ್ರ ಎಂದು ಗುರುತಿಸಿರುವ ಚೀನಾ, ಈಗ ತನ್ನ ಮಿತ್ರನಿಗೆ ಕೈಕೊಟ್ಟಿದೆ. 
ಭಾರತ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿದ್ದರ ಬಗ್ಗೆ ಪಾಕಿಸ್ತಾನವನ್ನು ಬೆಂಬಲಿಸದೇ ತಟಸ್ಥವಾಗಿ ಉಳಿದು ಶಾಕ್ ನೀಡಿದ್ದ ಚೀನಾ, ಈಗ ತನ್ನ ಆಪ್ತಮಿತ್ರ ರಾಷ್ಟ್ರಕ್ಕೆ ಮತ್ತೊಂದು ಶಾಕ್ ನೀಡಿದ್ದು, ಮೊದಲು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. 
ಸುಷ್ಮಾ ಸ್ವರಾಜ್ ಚೀನಾ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದರು, ಈಗ ಚೀನಾ ಸಹ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿ ಭಾರತದ ಹೇಳಿಕೆಗೆ ಧ್ವನಿಗೂಡಿಸಿರುವುದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನಡೆಯುಂಟಾಗುವುದಕ್ಕೆ ಕಾರಣವಾಗಿದ್ದು, ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಅಕ್ಷರಶಃ ಏಕಾಂಗಿಯಾಗಿದೆ. 
ಭಾರತ ಫೆ.24 ರಂದು ರಾತ್ರಿ 3 ಗಂಟೆಗೆ  ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿಯನ್ನು ಬೇರಾವ ರಾಷ್ಟ್ರವೂ ಖಂಡಿಸದೇ ಇದ್ದರೂ ಸಹ ಚೀನಾ ಖಂಡಿಸುತ್ತದೆ ಎಂಬ ನಿರೀಕ್ಷೆ ಪಾಕಿಸ್ತಾನಕ್ಕೆ ಇತ್ತು, ಆದರೆ ಪಾಕ್ ಪಾಲಿಗೆ ಆ ನಿರೀಕ್ಷೆ ಸುಳ್ಳಾಗಿದ್ದು, ಈಗ ಪರಮಾಪ್ತ ಮಿತ್ರ ಚೀನಾ ಸಹ ಪಾಕಿಸ್ತಾನದ ಕೈಬಿಟ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com