ಚೀನಾದಲ್ಲಿ ಭೀಕರ ದುರಂತ: ಗ್ಯಾಸ್ ಘಟಕದಲ್ಲಿ ಸ್ಫೋಟ, 10 ಸಾವು, 19 ಮಂದಿಗೆ ಗಾಯ

ಚೀನಾದಲ್ಲಿ ಭೀಕರ ಗ್ಯಾಸ್ ದುರಂತ ಸಂಭವಿಸಿದ್ದು, ಗ್ಯಾಸ್ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನಾದಲ್ಲಿ ಭೀಕರ ಗ್ಯಾಸ್ ದುರಂತ ಸಂಭವಿಸಿದ್ದು, ಗ್ಯಾಸ್ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಕನಿಷ್ಛ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾದ ಹೆನಾನ್ ಪ್ರಾಂತ್ಯದ ಯಿಮಾ ಸಿಟಿಯ ಹೊರವಲಯದಲ್ಲಿರುವ ಗ್ಯಾಸ್ ತಯಾರಿಕಾ ಘಟಕದಲ್ಲಿ ಇಂದು ಮುಂಜಾನೆ ಸ್ಫೋಟ ಸಂಭವಿಸಿದ್ದು, ಈ ವೇಳೆ ಸ್ಥಳದಲ್ಲೇ 10 ಮಂದಿ ಸಾವಿಗೀಡಾಗಿದ್ದಾರೆ. ಅಂತೆಯೇ ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಫೋಟದ ತೀವ್ರತೆಗೆ ಭಾರಿ ಪ್ರಮಾಣದ ಅಗ್ನಿ ಜ್ವಾಲೆಗಳು ಸೃಷ್ಟಿಯಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ. ಇನ್ನು ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಅದರೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. 
1997ರಲ್ಲಿ ಈ ಗ್ಯಾಸ್ ತಯಾರಿಕಾ ಘಟಕಾ ನಿರ್ಮಾಣಗೊಂಡಿತ್ತು. ಇತ್ತೀಚೆಗಷ್ಟೇ ತನ್ನ ಉತ್ಭಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಘಟಕದಲ್ಲಿ ಕೆಲ ಬದಲಾವಣೆ ತಂದಿತ್ತು. ಈ ವೇಳೆ ತಾಂತ್ರಿಕ ದೋಷದಿಂದಾಗಿ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com