ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್

ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್
ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್
ವಾಷಿಂಗ್ ಟನ್:ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. 
ಈ ಬಗ್ಗೆ ಮಾ.22 ರಂದು ಟ್ವೀಟ್ ಮಾಡಿರುವ ಟ್ರಂಪ್, ಅಮೆರಿಕಾದಿಂದ ಈಗಾಗಲೇ ಉತ್ತರ ಕೊರಿಯಾಗೆ ವಿಧಿಸಲಾಗಿರುವ ನಿರ್ಬಂಧದ ಜೊತೆಗೆ ಇತ್ತೀಚೆಗೆ ಹೆಚ್ಚುವರಿಯಾಗಿ ವಿಧಿಸಲಾಗಿದ್ದ ನಿರ್ಬಂಧದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂಬುದನ್ನು ಮಾತ್ರ  ಟ್ರಂಪ್ ಇನ್ನೂ ಸ್ಪಷ್ಟಪಡಿಸಿಲ್ಲ. 
ಇದಕ್ಕೂ ಮುನ್ನ ಚೀನಾ ವಿರುದ್ಧ ಉತ್ತರ ಕೊರಿಯಾ ನಿರ್ಬಂಧವನ್ನು ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದ ಅಮೆರಿಕ, ಚೀನಾ ಮೂಲದ ಎರಡು ಶಿಪ್ಪಿಂಗ್ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.
ಈಗ ಮಾ.22 ರಂದು ಅಮೆರಿಕ ಅಧ್ಯಕ್ಷರು ಉತ್ತರ ಕೊರಿಯಾ ವಿರುದ್ಧ ಇತ್ತೀಚೆಗಷ್ಟೇ ವಿಧಿಸಲಾಗಿದ್ದ ಹೆಚ್ಚುವರಿ ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ ಎಂದಷ್ಟೇ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com