ರಷ್ಯಾದಿಂದ 14.5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಸೇರಿ ಹಲವು ಒಪ್ಪಂದಗಳಿಗೆ ಭಾರತ ಸಹಿ

ರಷ್ಯಾದಿಂದ 14. 5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ, ವ್ಯಾಪಾರ , ಆರ್ಥಿಕತೆ ಹಾಗೂ ಹೂಡಿಕೆಯ ಸಹಕಾರವನ್ನು ಹೆಚ್ಚಿಸುವ ಕಾರ್ಯತಂತ್ರ ಸೇರಿದಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ರಷ್ಯಾ ಇಂದು ಸಹಿ ಹಾಕಿವೆ.
ಪ್ರಧಾನಿ ಮೋದಿ, ಪುಟಿನ್
ಪ್ರಧಾನಿ ಮೋದಿ, ಪುಟಿನ್
Updated on

ವ್ಲಾಡಿವೋಸ್ಟಾಕ್ : ರಷ್ಯಾದಿಂದ 14. 5 ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಖರೀದಿ, ವ್ಯಾಪಾರ , ಆರ್ಥಿಕತೆ ಹಾಗೂ ಹೂಡಿಕೆಯ ಸಹಕಾರವನ್ನು ಹೆಚ್ಚಿಸುವ ಕಾರ್ಯತಂತ್ರ ಸೇರಿದಂತೆ ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ರಷ್ಯಾ ಇಂದು ಸಹಿ ಹಾಕಿವೆ.

ಭಾರತವು 14.5 ಶತಕೋಟಿ ಡಾಲರ್ ಮೌಲ್ಯದ ರಷ್ಯಾದ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಲು ಸಮ್ಮತಿಸಿದೆ ಎಂದು ರಷ್ಯಾದ ಅಧಿಕಾರಿಗಳು ದೃಢಪಡಿಸಿದ್ದು, ಉಭಯ ರಾಷ್ಟ್ರಗಳ ನಡುವೆ ಇದೊಂದು ಮಹತ್ತರ ಹೆಜ್ಜೆಯಾಗಿದೆ. ಕಳೆದ ವರ್ಷ ಇದೇ ದಿನ 14. 5 ಶತಕೋಟಿ ಡಾಲರ್ ಮೌಲ್ಯದ ಬೃಹತ್ ಆರ್ಡರ್ ನೀಡಲಾಗಿತ್ತು. ಇದು ನಿಜಕ್ಕೂ ಮಹತ್ವದ ಪ್ರಗತಿಯಾಗಿದೆ ಎಂದು ರಷ್ಯಾದ ಫೆಡರಲ್ ಸರ್ವಿಸ್ ಆಫ್ ಮಿಲಿಟರಿ -ಟೆಕ್ನಿಕಲ್ ಕೋ ಆಪರೇಷನ್ ಡಿಮಿಟ್ರಿ ಶುಗಾಯೆವ್ ಹೇಳಿದ್ದಾರೆ.

ಇದಲ್ಲದೇ, ರಷ್ಯಾದ ಇಂಧನ ಸಚಿವಾಲಯ ಮತ್ತು ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಡುವೆ ಅನಿಲ ಮತ್ತು ತೈಲ ಉದ್ಯಮದಲ್ಲಿ ಸಹಕಾರದ ವಿಸ್ತರಣೆಯ ಕಾರ್ಯಕ್ರಮಕ್ಕೆ ಸಹಿ ಹಾಕಲಾಯಿತು. ಅನಿಲ ಇಂಧನದ ಬಳಕೆ ಕುರಿತ ತಿಳುವಳಿಕೆ ಪತ್ರಕ್ಕೂ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಭಾರತ – ರಷ್ಯಾ 20 ನೇ ದ್ವಿಪಕ್ಷೀಯ ವಾರ್ಷಿಕ ಶೃಂಗಸಭೆ ಸಮಾರೋಪದಲ್ಲಿ ಉಭಯ ದೇಶಗಳು,ಚೀನಾ ಮತ್ತು ವ್ಲಾಡಿವೋಸ್ಟಾಕ್ ನಡುವಣ ಸಂಪರ್ಕ ಕಲ್ಪಿಸುವ ಪೂರ್ಣ ಪ್ರಮಾಣದ ಸಮುದ್ರ ಮಾರ್ಗ ಬಯಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಪ್ರಧಾನಿ ಕಾರ್ಯಾಲಯದ ಟ್ವೀಟರ್ ನಲ್ಲಿ ಹೇಳಲಾಗಿದೆ. 

ಭಾರತ ಮತ್ತು ರಷ್ಯಾ ನಡುವೆ ಈಗಾಗಲೇ ಬಲವಾದ ಬಾಂಧವ್ಯವಿದ್ದು ಹೊಸ ವಲಯಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಸರಣಿ ಟ್ವೀಟ್ ನಲ್ಲಿ ತಿಳಿಸಲಾಗಿದೆ.ಭಾರತ ಮತ್ತು ರಷ್ಯಾ ಎರಡೂ ದೇಶಗಳು ಆಯಾ ದೇಶಗಳ ಆಂತರಿಕ ವಿಚಾರಗಳಲ್ಲಿ ಬಾಹ್ಯ ಪ್ರಭಾವಕ್ಕೆ ಮಣಿಯುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ನಿರ್ಧಾರ ಸಂಬಂಧ ಅಮೆರಿಕ ಮತ್ತು ಚೀನಾ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ಹೇಳಿಕೆ ಹೊರಬಿದ್ದಿದೆ.ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆ ನಿಗ್ರಹಕ್ಕೆ ಅಲ್ಲಿನ ಸರ್ಕಾರ ಕ್ರಮಕೈಗೊಳ್ಳದ ಹೊರತು ಪಾಕಿಸ್ತಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.

ರಷ್ಯಾದಲ್ಲಿ 2001 ರಲ್ಲಿ ನಡೆದ ವಾರ್ಷಿಕ ಶೃಂಗಸಭೆ ಸಂದರ್ಭದಲ್ಲಿ ಪುಟಿನ್ ಅಧ್ಯಕ್ಷರಾಗಿದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಾವು ಮಾಜಿ ಪ್ರಧಾನಿ ದಿ|| ಅಟಲ್ ಬಿಹಾರಿ ವಾಜಪೇಯಿ ಅವರ ನಿಯೋಗದೊಂದಿಗೆ ಶೃಂಗದಲ್ಲಿ ಪಾಲ್ಗೊಂಡಿದ್ದನ್ನು ಪ್ರಧಾನಿ ಮೋದಿ ಇದೇ ವೇಳೆ ಸ್ಮರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com