ಪಾಕ್ ಆರ್ಥಿಕ ಮುಗ್ಗಟ್ಟು: ಇಮ್ರಾನ್ ಖಾನ್ ಯುಎಸ್ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನವನ್ನೇ ನೀಡಿದ ಸೌದಿ ರಾಜ! 

ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದ್ದು, ಅಕ್ಷರಸಹ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಸ್ಥಿತಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ಸೌದಿ ಅರೇಬಿಯಾ ರಾಜ ನೆರವಾಗಿದ್ದಾರೆ.
ಪಾಕ್ ಆರ್ಥಿಕ ಮುಗ್ಗಟ್ಟು: ಇಮ್ರಾನ್ ಖಾನ್ ಯುಎಸ್ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನವನ್ನೇ ನೀಡಿದ ಸೌದಿ ರಾಜ!
ಪಾಕ್ ಆರ್ಥಿಕ ಮುಗ್ಗಟ್ಟು: ಇಮ್ರಾನ್ ಖಾನ್ ಯುಎಸ್ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನವನ್ನೇ ನೀಡಿದ ಸೌದಿ ರಾಜ!
Updated on

ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಹದಗೆಟ್ಟಿದ್ದು, ಅಕ್ಷರಸಹ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಸ್ಥಿತಿಯಲ್ಲಿರುವುದು ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ಸೌದಿ ಅರೇಬಿಯಾ ರಾಜ ನೆರವಾಗಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಪ್ರವಾಸಕ್ಕೆ ವಿಶೇಷ ವಿಮಾನ ಬಳಕೆ ಮಾಡುತ್ತಿಲ್ಲ ಎಂಬುದನ್ನು ಅರಿತ ಸೌದಿ ದೊರೆ  ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ತಮ್ಮ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಕಳಿಸಿಕೊಟ್ಟಿದ್ದಾರೆ. 

ನೀವು ನಮ್ಮ ಅತಿಥಿ ಎಂದು ಹೇಳಿರುವ ಸೌದಿ ಅರೇಬಿಯಾ ದೊರೆ ಪಾಕ್ ಪ್ರಧಾನಿಯ ಅಮೆರಿಕ ಪ್ರವಾಸಕ್ಕೆ ತಮ್ಮ ವಿಶೇಷ ವಿಮಾನ ನೀಡಿ ಅದರ ಖರ್ಚುವೆಚ್ಚಗಳನ್ನೆಲ್ಲಾ ತಾವೇ ಭರಿಸಿದ್ದಾರೆ. 

ಕಾಶ್ಮೀರ ವಿಷಯವಾಗಿ ಇಸ್ಲಾಮಿಕ್​ ರಾಷ್ಟ್ರಗಳ ಬೆಂಬಲ ಪಡೆಯುವ ನಿಟ್ಟಿನಲ್ಲಿ ಇಮ್ರಾನ್​ ಖಾನ್​ ಅಮೆರಿಕಕ್ಕೆ ತೆರಳುವ ಮುನ್ನ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. 2 ದಿನಗಳ ಪ್ರವಾಸದಲ್ಲಿ ಇಮ್ರಾನ್ ಖಾನ್ ವಿವಿಧ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಅಮೆರಿಕಾದಲ್ಲಿ ಸೆ.23 ರಂದು ಇಮ್ರಾನ್ ಖಾನ್ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com