'ಹೌಡಿ, ಮೋದಿ'ಯಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಟ್ರಂಪ್ ಭಾಷಣ: ಶ್ವೇತ ಭವನ

ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿಲಿದ್ದಾರೆಂದು ಭಾನುವಾರ ಶ್ವೇತಭವನ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಬೃಹತ್ ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿಲಿದ್ದಾರೆಂದು ಭಾನುವಾರ ಶ್ವೇತಭವನ ಮಾಹಿತಿ ನೀಡಿದೆ. 

ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಅವರು, ಸಮಾವೇಶ ಭಾರತ ಮತ್ತು ಅಮೆರಿಕಾದ ನಡುವೆ ಇರುವ ವಿಶೇಷತೆಯ ಪ್ರತಿಬಿಂಬವಾಗಲಿದೆ. ಇದೊಂದು ಐತಿಹಾಸಿಕ ಹಾಗೂ ಅಭೂತಪೂರ್ವ ಕಾರ್ಯಕ್ರಮವಾಗಲಿದೆ. ಕಾರ್ಯಕ್ರಮ ಉಭಯ ರಾಷ್ಟ್ರಗಳ ಇಬ್ಬರು ನಾಯಕರ ವೈಯಕ್ತಿಕ ಸಂಬಂಧ ಹಾಗೂ ಸ್ನೇಹವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. 

ಅಮೆರಿಕಾದ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್'ನಲ್ಲಿ ಹೌಡಿ ಮೋದಿ ಎಂಬ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಭಾಷಣ ಮಾಡಲಿದ್ದಾರೆ. 50 ಸಾವಿರ ಮಂದಿ ಈ ಸಮಾವೇಶಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಿ ಚುನಾಯಿತಿ ಪ್ರತಿನಿಧಿಯ ಭಾಷಣ ಆಲಿಸಲು ಅಮೆರಿಕಾದಲ್ಲಿ ಇಷ್ಟೊಂದು ಜನಸೇರಿದ ಇತಿಹಾಸವೇ ಇಲ್ಲ. ಕ್ರೈಸ್ತರ ಪರಮೋಚ್ಛ ಗುರು ಪೋಪ್ ಹೊರತುಪಡಿಸಿ ಅತಿ ಹೆಚ್ಚು ಜನರನ್ನುದ್ದೇಶಿಸಿ, ಭಾಷಣ ಮಾಡುತ್ತಿರುವ ಮೊದಲ ವಿಶ್ವ ನಾಯಕ ಮೋದಿ ಅವರಾಗಿದ್ದಾರೆಂಬುದು ಈ ರ್ಯಾಲಿಯ ವಿಶೇಷವಾಗಿದೆ. 

ಇಂದು ರಾತ್ರಿ 8.30ಕ್ಕೆ (ಭಾರತೀಯ ಕಾಲಮಾನ), ಹೌಡಿ ಮೋದಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಅಮೆರಿಕಾದ ವಿವಿಧೆಡೆಯ 400 ಭಾರತೀಯ ಮೂಲದ ಕಲಾವಿದರು ಒಂದೂವರೆ ತಾಸು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅದಾದ ಬಳಿಕ ರಾತ್ರಿ 10ಕ್ಕೆ ಮೋದಿ ಅವರ ಭಾಷಣ ಪ್ರಾರಂಭವಾಗಲಿದೆ. ಮೋದಿಯವರ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಇದೇ ಕಾರ್ಯಕ್ರಮದಲ್ಲಿ ಮಹತ್ವದ ಘೋಷಣೆಯೊಂದನ್ನು ಟ್ರಂಪ್ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com