5 ಭಾರತೀಯೇತರ ಕುಟುಂಬಗಳನ್ನು ಪ್ರತೀವರ್ಷ ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ: ಅನಿವಾಸಿ ಭಾರತೀಯರಿಗೆ ಮೋದಿ 

ಪ್ರತೀವರ್ಷ 5 ಭಾರತೀಯೇತರ ಕುಟುಂಬಗಳನ್ನು ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ ಎಂದು ಅನಿವಾಸಿ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ. 
ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ
ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ

ಹ್ಯೂಸ್ಟನ್: ಪ್ರತೀವರ್ಷ 5 ಭಾರತೀಯೇತರ ಕುಟುಂಬಗಳನ್ನು ಪ್ರವಾಸಿಗರಂತೆ ಭಾರತಕ್ಕೆ ಕಳುಹಿಸಿ ಎಂದು ಅನಿವಾಸಿ ಭಾರತೀಯರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಮನವಿ ಮಾಡಿಕೊಂಡಿದ್ದಾರೆ. 

ಹ್ಯೂಸ್ಟನ್ ನಲ್ಲಿ ಎನ್ಆರ್'ಜಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತ ಬಹುನಿರೀಕ್ಷೀತ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ನನಗಾಗಿ ಒಂದು ಕೆಲಸವನ್ನು ಮಾಡುತ್ತೀರಾ? ನನ್ನದೊಂದು ಸಣ್ಣ ಮನವಿಯಿದೆ. ಇಡೀ ವಿಶ್ವದಲ್ಲಿರುವ ಎಲ್ಲಾ ಭಾರತೀಯರಿಗೂ ನಾನು ಹೇಳುತ್ತಿದ್ದೇನೆ. ಪ್ರತೀವರ್ಷ ಒಂದು ನಿರ್ಧಾರ ತೆಗೆದುಕೊಳ್ಳಿ. ಪ್ರತೀವರ್ಷ ಕನಿಷ್ಟ 5 ಭಾರತೀಯೇತರ ಕುಟುಂಬಗಳನ್ನು ಪ್ರವಾಸಿಗರನ್ನಾಗಿ ಭಾರತಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ. 

ಭರ್ಜರಿ ಹೌಡಿ ಮೋದಿ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿಯವರು, ಮಹಾತ್ಮಾ ಗಾಂಧಿ ಮ್ಯೂಸಿಯಂ ಫಲಕ ಅನಾವರಣಗೊಳಿಸಿದ್ದರು. 

ಗಾಂಧಿ ಮ್ಯೂಸಿಯಂ ಫಲಕವನ್ನು ಅನಾವರಣಗೊಳಿಸಿದ್ದರ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಗಾಂಧಿ ಮ್ಯೂಸಿಯಂ ಹ್ಯೂಸ್ಟನ್ ನಲ್ಲಿ ಬೆಲೆಯುಳ್ಳ ಸಾಂಸ್ಕೃತಿಕ ಹೆಗ್ಗುರುತಾಗಲಿದೆ. ಇಂತಹ ದೊಡ್ಡ ಪರಿಶ್ರಮದಲ್ಲಿ ನಾನೂ ಕೂಡ ಈ ಹಿಂದೆಯೇ ಪಾಲ್ಗೊಂಡಿದ್ದೆ. ಇಂದು ಖಂಡಿತವಾಗಿಯೂ ಗಾಂಧೀಜಿವಯರ ಆಲೋಚನೆಗಳನ್ನು ಯುವಕರಲ್ಲಿ ಜನಪ್ರಿಯಗೊಳಿಸಲಿದೆ ಎಂದು ಹೇಳಿದ್ದಾರೆ. 

ಇದಲ್ಲದೆ, ಇಂಡೋ-ಅಮೆರಿಕಾ ಸಂಬಂಧಗಳ ಅದ್ಭುತ ಭವಿಷ್ಯಕ್ಕೆ ವೇದಿಕೆ ಕಲ್ಪಿಸಿದ್ದಕ್ಕಾಗಿ ಹ್ಯೂಸ್ಟನ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ಮೋದಿಯವರು ಧನ್ಯವಾದಗಳನ್ನು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com