ಭಾರತ ದಾಳಿ ಬಗ್ಗೆ ಮೊದಲೆ ಸೂಚನೆ ನೀಡಿತ್ತು, ನಮ್ಮಿಂದ ಲೋಪವಾಯಿತು: ಶ್ರೀಲಂಕಾ ಪ್ರಧಾನಿ

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸುತ್ತದೆ ಎಂದು ಭಾರತ ಮೊದಲ ಸೂಚನೆ ನೀಡಿತ್ತು. ಆದರೆ ನಮ್ಮಲ್ಲಿ ನಿಸ್ಸಂಶಯವಾಗಿ ಲೋಪವಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.

Published: 23rd April 2019 12:00 PM  |   Last Updated: 23rd April 2019 09:12 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಕೊಲೊಂಬೊ: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸುತ್ತದೆ ಎಂದು ಭಾರತ ಮೊದಲ ಸೂಚನೆ ನೀಡಿತ್ತು. ಆದರೆ ನಮ್ಮಲ್ಲಿ ನಿಸ್ಸಂಶಯವಾಗಿ ಲೋಪವಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ. 

ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತ ನಮ್ಮೊಂದಿಗೆ ಕೆಲ ಗುಪ್ತಚರ ಮಾಹಿತಿಗಳನ್ನು ಹಂಚಿಕೊಂಡಿತ್ತು. ಅದನ್ನು ಬಳಸಿಕೊಳ್ಳುವಲ್ಲಿ ನಮ್ಮಿಂದ ಲೋಪವಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ನಮ್ಮ ತನಿಖಾ ಸಂಸ್ಥೆಗಳು ನಿರಂತರ ಸಂಪರ್ಕದಲ್ಲಿವೆ. ದೇಶದ ಹೊರಗಿನ ಮಾಹಿತಿ ಕಲೆ ಹಾಕಲು ಇತರ ದೇಶಗಳ ತನಿಖೆ ಸಂಸ್ಥೆಗಳ ನೆರವನ್ನೂ ನಾವು ಕೇಳಿದ್ದೇವೆ ಎಂದರು.

ಇನ್ನು ಬಾಂಬ್ ದಾಳಿಯ ಹೊಣೆಯನ್ನು ಇಸಿಸ್ ಹೊತ್ತುಕೊಂಡಿದ್ದು ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಗಳಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ವಿಕ್ರಮಸಿಂಘೆ, ಕ್ರೈಸ್ಟ್ ಚರ್ಚ್ ಮೇಲಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆದಿರುವ ಸಾಧ್ಯತೆಗಳಿವೆ. ಆದರೆ ಅದೇ ನಿಖರ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇನ್ನು ತನಿಖೆ ನಡೆಸುತ್ತಿರುವ ಪೊಲೀಸರಷ್ಟೇ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp