ಸಮಯ ಪ್ರಜ್ಞೆ ಮೆರೆದ ಪೈಲಟ್: ಹೊಲದಲ್ಲಿ ವಿಮಾನ ತುರ್ತು ಭೂಸ್ಪರ್ಶ; 233 ಮಂದಿ ಬಚಾವ್!

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ಎಂಜಿನ್ ಗೆ ಬಡಿದಿದ್ದರಿಂದ ವಿಮಾನ ಬೆಂಕಿಗಾಹುತಿಯಾಗುವ ಸಾಧ್ಯತೆಯನ್ನು ಗಮನಿಸಿದ ಪೈಲಟ್ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿ ಹೀರೋ ಆಗಿದ್ದಾರೆ.
ಯೂರಾಲ್ ವಿಮಾನ
ಯೂರಾಲ್ ವಿಮಾನ

ಮಾಸ್ಕೋ: ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ಎಂಜಿನ್ ಗೆ ಬಡಿದಿದ್ದರಿಂದ ವಿಮಾನ ಬೆಂಕಿಗಾಹುತಿಯಾಗುವ ಸಾಧ್ಯತೆಯನ್ನು ಗಮನಿಸಿದ ಪೈಲಟ್ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿ ಹೀರೋ ಆಗಿದ್ದಾರೆ.

ಮಾಸ್ಕೋದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದರಿಂದ 23 ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 

ಯೂರಾಲ್ ಏರ್ ಲೈನ್ಸ್ ಏರ್ ಬಸ್ 321 ಟೇಕ್ ಆಫ್ ಆಗುತ್ತಿದ್ದಂತೆಯೇ ಹಕ್ಕಿಗಳ ಹಿಂಡು ಇಂಜಿನ್ ಗೆ ಬಡಿದಿತ್ತು. ಮೊದಲಿಗೆ ಪೈಲಟ್ ಡ್ಯಾಮಿರ್ ಯೂಸೂಫೋವ್ ವಿಮಾನವನ್ನು ಮಾಸ್ಕೋದ ಜುಕೋವಸ್ಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದ್ದರು. ಆದರೆ ಇದರಿಂದ ತೊಂದರೆ ಜಾಸ್ತಿ ಎಂದು ಪರಿಗಣಿಸಿ ಹೊಲದಲ್ಲಿ ಲ್ಯಾಂಡ್ ಮಾಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com