ಭೂತಾನ್ ಗೆ ಪ್ರಧಾನಿ ಮೋದಿ ಆಗಮನ, ಎರಡು ದಿನದ ಪ್ರವಾಸದಲ್ಲಿ ಹಲವು ಒಪ್ಪಂದಗಳಿಗೆ ಸಹಿ

ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಭೂತಾನ್ ಗೆ ಆಗಮಿಸಿದ್ದಾರೆ.

Published: 17th August 2019 01:01 PM  |   Last Updated: 17th August 2019 01:04 PM   |  A+A-


ಭೂತಾನ್ ಗೆ ಪ್ರಧಾನಿ ಮೋದಿ ಆಗಮನ

Posted By : Raghavendra Adiga
Source : The New Indian Express

ಪಾರೋ(ಭೂತಾನ್): ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಭೂತಾನ್ ಗೆ ಆಗಮಿಸಿದ್ದಾರೆ.

ಪಾರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೋದಿಯವರನ್ನು ಅವರ ಭೂತಾನ್  ಸಹವರ್ತಿ ಡಾ. ಲೋಟೆ ಷೇರಿಂಗ್ ಮತ್ತಿತರರು ಆದರದಿಂದ ಸ್ವಾಗತಿಸಿದ್ದಾರೆ.

ಭೂತಾನ್ ರಾಜಧಾನಿ ತಿಂಪುವಿನ ಪಶ್ಚಿಮಕ್ಕಿರುವ ಕಣಿವೆ ನಗರವಾದ ಪಾರೋ ವಿಮಾನದಲ್ಲಿಳಿಯುತ್ತಿದ್ದಂತೆ ಪ್ರಧಾನಿಗಳಿಗೆ ಮಗುವೊಂದು ಪುಷ್ಪಗುಚ್ಚ ನೀಡಿದೆ. ಅಲ್ಲದೆ ಮೋದಿಗೆ ವಿಮಾನ ನಿಲ್ದಾಣದಲ್ಲಿ ಗೌರವ ರಕ್ಷೆ ನೀಡಲಾಗಿತ್ತು.

ಮೋದಿಯವರು ಎರಡನೇ ಬಾರಿ ಭಾರತದ ಪ್ರಧಾನಿಯಾದ ನಂತರ ಇದು ಮೊದಲ ಭೂತಾನ್ ಭೇಟಿಯಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ರುಪೇ ಕಾರ್ಡ್ ಬಿಡುಗಡೆ, ಐದು ದಶಕಗಳ ಭಾರತ-ಭೂತಾನ್ ಜಲಶಕ್ತಿ ಸಹಕಾರದ ನೆನಪಿಗಾಗಿ ಅಂಚೆಚೀಟಿ ಬಿಡುಗಡೆ ಮತ್ತು ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಪ್ರವಾಸ ಹೇಳಿಕೆ ನೀಡಿದ ಅವರು ನಮ್ಮ ದ್ವಿಪಕ್ಷೀಯ ಸಂಬಂಧ ಕುರಿತು ಭೂತಾನ್ ಪ್ರಧಾನ ಮಂತ್ರಿಗಳೊಂದಿಗೆ ಫಲಪ್ರದ ಚರ್ಚೆ ನಡೆಸಲು ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಈ ಅವಧಿಯಲ್ಲಿ ಅವರು ಭೂತಾನ್‌ನ ಪ್ರತಿಷ್ಠಿತ ರಾಯಲ್ ವಿಶ್ವವಿದ್ಯಾನಿಲಯದಲ್ಲಿ ಯುವ ಭೂತಾನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp