ಗಾಜಾಪಟ್ಟಿ ಮತ್ತೆ ಪ್ರಕ್ಷುಬ್ಧ; ಗಾಜಾದಿಂದ ಸಿಡಿದ 3 ರಾಕೆಟ್​ಗಳ ಪೈಕಿ 2ನ್ನು ಹೊಡೆದುರುಳಿಸಿದ ಇಸ್ರೇಲ್​

ಇಸ್ರೇಲ್ ಸೇನಾಪಡೆ ಮತ್ತು ಪ್ಯಾಲೆಸ್ತೀನ್ ಬಂಡುಕೋರರ ನಡುವಿನ ಹೋರಾಟ ತೀವ್ರವಾಗಿದ್ದು, ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಗಾಜಾದಿಂದ ಮೂರು ರಾಕೆಟ್​ ದಾಳಿ ನಡೆದಿದೆ. 

Published: 18th August 2019 12:16 PM  |   Last Updated: 18th August 2019 12:16 PM   |  A+A-


Israel shoots down 2 out of 3 rockets fired from Gaza

ಗಾಜಾದಿಂದ ಇಸ್ರೇಲ್ ನತ್ತ ಸಿಡಿದ ರಾಕೆಟ್ ಗಳು

Posted By : Srinivasamurthy VN
Source : ANI

ಟೆಲ್​ ಅವೀವ್​: ಇಸ್ರೇಲ್ ಸೇನಾಪಡೆ ಮತ್ತು ಪ್ಯಾಲೆಸ್ತೀನ್ ಬಂಡುಕೋರರ ನಡುವಿನ ಹೋರಾಟ ತೀವ್ರವಾಗಿದ್ದು, ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಗಾಜಾದಿಂದ ಮೂರು ರಾಕೆಟ್​ ದಾಳಿ ನಡೆದಿದೆ. 

ಈ ಮೂರು ರಾಕೆಟ್ ಗಳ ಪೈಕಿ ಎರಡು ರಾಕೆಟ್ ​ಗಳನ್ನು ತಾನು ಹೊಡೆದುರುಳಿಸಿದ್ದಾಗಿ ಇಸ್ರೇಲ್​ ಸೇನಾಪಡೆ ಹೇಳಿಕೊಂಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಇಸ್ರೇಲ್​ ಸೇನಾಪಡೆ, ಗಾಜಾದಿಂದ ಇಸ್ರೇಲ್​ ಮೇಲೆ ಮೂರು ರಾಕೆಟ್ ​ಗಳು ದಾಳಿ ನಡೆಯಿತು. ನಾವು ಅಳವಡಿಸಿಕೊಂಡಿರುವ ಡೋಮ್​ ವೈಮಾನಿಕ ರಕ್ಷಣಾ ವ್ಯವಸ್ಥೆ (ಡೋಮ್​ ಏರಿಯಲ್​ ಡಿಫೆನ್ಸ್​ ಸಿಸ್ಟಮ್​) ಬಳಸಿ ಎರಡು ರಾಕೆಟ್​ಗಳನ್ನು ಹೊಡೆದುರುಳಿಸಲಾಯಿತು ಎಂದು ಹೇಳಿದೆ.

ಇನ್ನು ಗಾಜಾಪಟ್ಟಿಯಲ್ಲಿ ಇಸ್ರೇಲ್​ ಯೋಧರು ಮತ್ತು ಪ್ಯಾಲೆಸ್ತೀನಿಯರ ನಡುವೆ ಶನಿವಾರ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯಲ್ಲಿ ಪ್ಯಾಲಿಸ್ತೀನ್ ​ನ 77 ಬಂಡುಕೋರರು ಮೃತಪಟ್ಟಿದ್ದರು. ಇದಾದ 24 ಗಂಟೆಗಳ ಅಂತರದಲ್ಲಿ ಪ್ಯಾಲೆಸ್ತೀನ್​ ಇಸ್ರೇಲ್​ ಮೇಲಿನ ದಾಳಿಯನ್ನು ಚುರುಕುಗೊಳಿಸಿದೆ. ಕಳೆದೆರಡು ದಿನಗಳಿಂದ ಅದು ಇಸ್ರೇಲ್​ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇ ಇದೆ. ಈ ಪೈಕಿ ಶನಿವಾರ ರಾಕೆಟ್ ದಾಳಿ ಕೂಡ ಆರಂಭಿಸಲಾಗಿದೆ. ಅಂತೆಯೇ ಈ ವರೆಗೂ ಗಾಜಾಪಟ್ಟಿಯಲ್ಲಿ ನಡೆದ ವಿವಿಧ ಘರ್ಷಣೆಗಳಲ್ಲಿ ಸುಮಾರು 270ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp