ನಮ್ಮ ಪ್ರಯತ್ನವೆಲ್ಲಾ ಮುಗಿದಿದೆ, ಭಾರತದೊಡನೆ ಮಾತನಾಡುವುದು ಅರ್ಥಹೀನ: ಇಮ್ರಾನ್ ಖಾನ್

ಭಯೋತ್ಪಾದನೆ ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಳನ್ನು ಒಟ್ಟಾಗಿಸಲು ಸಾಧ್ಯವಿಲ್ಲ ಎಂಬ ಭಾರತದ ಸ್ಥಿರ ನಿಲುವಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗಿನ ಭವಿಷ್ಯದ ಮಾತುಕತೆ ಸಾಧ್ಯತೆಗಳನ್ನು ತಳ್ಳಿಹಾಕಿದ್ದು, ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
 

Published: 22nd August 2019 05:56 PM  |   Last Updated: 22nd August 2019 05:56 PM   |  A+A-


ಇಮ್ರಾನ್ ಖಾನ್

Posted By : Raghavendra Adiga
Source : UNI

ನ್ಯೂಯಾರ್ಕ್/ನವದೆಹಲಿ: ಭಯೋತ್ಪಾದನೆ ಮತ್ತು ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗಳನ್ನು ಒಟ್ಟಾಗಿಸಲು ಸಾಧ್ಯವಿಲ್ಲ ಎಂಬ ಭಾರತದ ಸ್ಥಿರ ನಿಲುವಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದೊಂದಿಗಿನ ಭವಿಷ್ಯದ ಮಾತುಕತೆ ಸಾಧ್ಯತೆಗಳನ್ನು ತಳ್ಳಿಹಾಕಿದ್ದು, ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.

 ಭಾರತದೊಂದಿಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ತಮ್ಮ ಪ್ರಕಾರ, ತಾವು ಎಲ್ಲಾ ಮಾತುಕತೆಗಳನ್ನು ಮುಗಿಸಿದ್ದೇವೆ. ದುರದೃಷ್ಟವಶಾತ್, ಈಗ ಹಿಂತಿರುಗಿ ನೋಡಿದಾಗ, ಶಾಂತಿ ಮತ್ತು ಮಾತುಕತೆಗಾಗಿ ನಾವು ಮಾಡುತ್ತಿರುವ ಎಲ್ಲ ಯತ್ನಗಳನ್ನು ಭಾರತವನ್ನು ಸಮಾಧಾನಪಡಿಸುವುದಕ್ಕಾಗಿ ಮಾಡಿದ್ದೆ ಎಂದು ನಾವು ಭಾವಿಸುತ್ತೇವೆ ಎಂದು ಖಾನ್ ದಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

 ಇಸ್ಲಾಮಾಬಾದ್‌ನ ತಮ್ಮ ಕಚೇರಿಯಲ್ಲಿ ನೀಡಿದ ಸಂದರ್ಶನದಲ್ಲಿ ಮಾಜಿ ಕ್ರಿಕೆಟ್ ಐಕಾನ್ ಖಾನ್‌, ನಾವು ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

 ಖಾನ್ ಅವರ ಟೀಕೆಗಳ ಬಗ್ಗೆ ಭಾರತ ಸರ್ಕಾರದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

 ಆದಾಗ್ಯೂ, ಅಮೆರಿಕದ ಭಾರತದ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರ ಹೇಳಿಕೆಯನ್ನು ಇದೇ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ನಾವು ಶಾಂತಿಯತ್ತ ಪ್ರತಿ ಬಾರಿಯೂ ಹೆಜ್ಜೆಯಿಟ್ಟಾಗ ಅದು ನಮಗೆ ಕೆಟ್ಟದಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನವು ವಿಶ್ವಾಸಾರ್ಹ, ಬದಲಾಯಿಸಲಾಗದ ಮತ್ತು ಪರಿಶೀಲಿಸಬಹುದಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ರಾಯಭಾರಿ ಹೇಳಿದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp