ಅಯ್ಯೋ ವಿಧಿಯೆ! ಪ್ರೀತಿಸಿ ವಿವಾಹವಾದ ಕೆಲವೇ ಕ್ಷಣಗಳಲ್ಲಿ ಮಸಣ ಸೇರಿದ ನವಜೋಡಿ

ಬಾಲ್ಯದ ಗೆಳತಿಯೊಡನೆ ವಿವಾಹವಾಗಿ ಸುಖಜೀವನ ಕಟ್ಟಿಕೊಳ್ಳಬೇಕೆನ್ನುವ ಕನಸು ಕಂಡಿದ್ದ ವ್ಯಕ್ತಿಯೊಬ್ಬನ ಕನಸು ಮದುವೆಯಾಗಿ ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಗಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.
 

Published: 25th August 2019 01:25 PM  |   Last Updated: 25th August 2019 01:25 PM   |  A+A-


ಪ್ರೀತಿಸಿ ವಿವಾಹವಾದ ಕೆಲವೇ ಕ್ಷಣಗಳಲ್ಲಿ ಮಸಣ ಸೇರಿದ ನವಜೋಡಿ

Posted By : Raghavendra Adiga
Source : Online Desk

ಟೆಕ್ಸಾಸ್(ಅಮೇರಿಕಾ): ಬಾಲ್ಯದ ಗೆಳತಿಯೊಡನೆ ವಿವಾಹವಾಗಿ ಸುಖಜೀವನ ಕಟ್ಟಿಕೊಳ್ಳಬೇಕೆನ್ನುವ ಕನಸು ಕಂಡಿದ್ದ ವ್ಯಕ್ತಿಯೊಬ್ಬನ ಕನಸು ಮದುವೆಯಾಗಿ ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಗಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.

ಟೆಕ್ಸಾಸ್ ನ ಮೋರ್ಗನ್ (19) ಹಾಗೂ ಬುರೇಡೆಕ್ಸ್ (20) ನವಜೋಡಿ ತಮ್ಮ ಕನಸಿನಂತೆ ವಿವಾಹವಾಗಿದ್ದು ಕೆಲವೇ ಕ್ಷಣಗಳಲ್ಲಿ ಸಂಭವಿಸಿದ ಅಪಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಮದುವೆ ಆಗಿ ಚರ್ಚ್ ನಿಂದ ಹೊರಬರುತ್ತಿದ್ದ ನವಜೋಡಿಗೆ ಟ್ರಕ್ ಒಂದು ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ಬುರೇಡೆಕ್ಸ್ ಹಾಗೂ ಮೋರ್ಗನ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದು ಜಾಯ್ ಡುಬೋಸ್-ಸಿಮಂಟನ್ ಬಳಿಯ ಜಸ್ಟಿಸ್ ಆಫ್ ಪೀಸ್‍ನ ಚೆಂಬರ್  ಸಮೀಪದಲ್ಲಿ ಅಪಘಾತದಿಂದ ಅಸುನೀಗಿದ್ದಾರೆ. ಸಾಯುವ ವೇಳೆ ಅವರಿನ್ನೂ ವೆಡ್ಡಿಂಗ್ ಸೂಟ್ ನಲ್ಲಿಯೇ ಇದ್ದರೆನ್ನುವುದು ಗಮನಾರ್ಹ ಸಂಗತಿ

ಶುಕ್ರವಾರ ನಡೆದ ಘಟನೆಗೆ ಟ್ರಕ್ ಚಾಲಕನ ಅಜಾಗರೂಕತೆಯೇ ಕಾರಣವಾಗಿದ್ದು ಹೊಸ ಜೀವನ ಪ್ರಾರಂಭಿಸಬೇಕಾಗಿದ್ದ ನವಜೋಡಿ ಮಸಣ ಸೇರಿದೆ.

ಒಟ್ಟಾರೆ ವಿಧಿಯಾಟದ ಮುಂದೆ ಮಾನವ ಜೀವನ ನಶ್ವರ ಎಂಬುದಕ್ಕೆ ಈ ಘಟನೆ ಒಂದು ಹೊಸ ಸಾಕ್ಷಿಯನ್ನು ಒದಗಿಸಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp