ಕತ್ತೆ ಬಳಿಕ ಇದೀಗ ಬೀದಿ ನಾಯಿ ರಫ್ತಿಗೆ ಮುಂದಾದ 'ಭಿಕಾರಿ' ಪಾಕಿಸ್ತಾನ!

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತರ ದೇಶಗಳ ಮುಂದೆ ದೇಹೀ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ದೇಶ ಅನುದಾನ ನೀಡಲು ಮುಂದಾಗುತ್ತಿಲ್ಲ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇತರ ದೇಶಗಳ ಮುಂದೆ ದೇಹೀ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ದೇಶ ಅನುದಾನ ನೀಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಹಣಕಾಸಿನ ಅಭಾವ ಸರಿದೂಗಿಸಲು ಬೀದಿ ನಾಯಿ ರಫ್ತಿಗೆ ಮುಂದಾಗಿದೆ.

ಈ ಹಿಂದೆ ಚೀನಾಗೆ ಪಾಕಿಸ್ತಾನ ಕತ್ತೆ ರಫ್ತು ಮಾಡಿತ್ತು. ಇದೀಗ ಕತ್ತೆ ಜೊತೆಗೆ ಬೀದಿ ನಾಯಿಯನ್ನು ಚೀನಾ ಮತ್ತು ಫಿಲಿಪೈನ್ಸ್ ಗಳಿಗೆ ರಫ್ತು ಮಾಡಲು ನಿರ್ಧರಿಸಿದೆ. ಈ ಮಧ್ಯೆ ಸರ್ಕಾರಿ ಸಭೆಗಳಲ್ಲಿ ಕಾಫಿ, ಬಿಸ್ಕೆಟ್ ಮತ್ತು ತಿಂಡಿಗಳನ್ನು ಬ್ಯಾನ್ ಮಾಡಲಾಗಿದೆ. 

ಇದರ ಜೊತೆಗೆ ಹಲವು ಸರ್ಕಾರಿ ಅತಿಥಿ ಗೃಹಗಳನ್ನು ಬಾಡಿಗೆಗೆ, ಹೊಸ ಉದ್ಯೋಗ ಸೃಷ್ಟಿಗೂ ಕಡಿವಾಣ, ಬೈಕ್ ಅನ್ನು ಬಿಟ್ಟರೆ ವಾಹನಗಳ ಖರೀದಿಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಡಿವಾಣ ಹಾಕಿದ್ದಾರೆ. 

ಕತ್ತೆ ಅಭಿವೃದ್ಧಿ ಯೋಜನೆಗೆ 1 ಬಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದ್ದು, ತನ್ನ ಖೈಬರ್-ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಚೀನಾದ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಕತ್ತೆಗಳನ್ನು ಚೀನಾಗೆ ರಫ್ತು ಮಾಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಈ ಪ್ರಾಂತ್ಯದ ಕತ್ತೆಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೆಲೆ ಇದ್ದು, ಈ ಪ್ರಾಂತ್ಯದಲ್ಲಿರುವ ಕತ್ತೆಗಳ ಚರ್ಮದಿಂದ ಔಷಧಗಳನ್ನು ತಯಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ತೀರ್ಮಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com