ಪಾಕ್ ಬಾಕ್ಸರ್ ಅಮೀರ್ ಖಾನ್ ನೀಚ ಬುದ್ಧಿ; ಭಾರತದ 'ಹೀರೋ' ಅಭಿನಂದನ್ ಮಿಮಿಕ್ರಿ ಮಾಡಿರುವ ವಿಡಿಯೋ ವೈರಲ್!

ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಹೀರೋ ಆಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಪಾಕಿಸ್ತಾನ-ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮಿಮಿಕ್ರಿ ಮಾಡಿರುವ ವಿಡಿಯೋ...
ಅಭಿನಂದನ್-ಅಮೀರ್ ಖಾನ್
ಅಭಿನಂದನ್-ಅಮೀರ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಹೀರೋ ಆಗಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಪಾಕಿಸ್ತಾನ-ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಮಿಮಿಕ್ರಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಭಾರತೀಯರು ಅಮೀರ್ ಗೆ ಸಖತ್ ತಿರುಗೇಟು ನೀಡಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿರುವ ಅಮೀರ್ ಖಾನ್ ನಮ್ಮ ಕಾಶ್ಮೀರಿ ಸಹೋದರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಈ ವಿಡಿಯೋವನ್ನು ಮಾಡಿದ್ದಾರೆ. ವಿಡಿಯೋದಲ್ಲಿ ಅಮೀರ್ ಫೆಂಟಾಸ್ಟಿಕ್ ಟೀ, ಕಾಶ್ಮೀರಿ ಟೀ(ಅದ್ಭುತ ಟೀ, ಕಾಶ್ಮೀರಿ ಟೀ) ಎಂದು ಅಭಿನಂದನ್ ರೀತಿ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋವನ್ನು ಪಾಕಿಸ್ತಾನದ ಮೇಜರ್ ಜನರಲ್ ಅಸೀಫ್ ಗಫೂರ್ ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಕುರಿತು ಭಾರತೀಯರು ಕಿಡಿಕಾರಿದ್ದಾರೆ. 

ಫೆಬ್ರವರಿ 27ರಂದು ಭಾರತದ ಗಡಿ ದಾಟಿ ಒಳ ಬಂದಿದ್ದ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಅಭಿನಂದನ್ ವರ್ಧಮಾನ್ ಅವರು ಸುಖೋಯ್ ಯುದ್ಧ ವಿಮಾನದ ಮೂಲಕ ಹೊಡೆದುರುಳಿಸಿದ್ದರು. ಅಲ್ಲದೆ ಈ ದಾಳಿಯಲ್ಲಿ ತಮ್ಮ ವಿಮಾನ ಪತನಗೊಂಡಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುರಕ್ಷಿತವಾಗಿ ಉಳಿದಿದ್ದರು. 

ಈ ವೇಳೆ ಅಭಿನಂದನ್ ರನ್ನು ವಶಕ್ಕೆ ಪಡೆದಿದ್ದ ಪಾಕ್ ಸೇನೆ ಅವರಿಗೆ ಟೀ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com