ಅಕ್ರಮ ಪ್ರಜೆಗಳ ಪಟ್ಟಿಕೊಡಿ ಎಂದ ಬಾಂಗ್ಲಾ ವಿದೇಶಾಂಗ ಸಚಿವ

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎನ್ನಲಾದ ಬಾಂಗ್ಲಾ ಪ್ರಜೆಗಳ ಪಟ್ಟಿ, ವಿವರ ನೀಡಿದರೆ  ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುಲು ಸಿದ್ದವಿರುವುದಾಗಿ   ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.
ಅಕ್ರಮ ಪ್ರಜೆಗಳ ಪಟ್ಟಿಕೊಡಿ ಎಂದ ಬಾಂಗ್ಲಾ ವಿದೇಶಿ ಸಚಿವ
ಅಕ್ರಮ ಪ್ರಜೆಗಳ ಪಟ್ಟಿಕೊಡಿ ಎಂದ ಬಾಂಗ್ಲಾ ವಿದೇಶಿ ಸಚಿವ

ಢಾಕಾ: ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎನ್ನಲಾದ ಬಾಂಗ್ಲಾ ಪ್ರಜೆಗಳ ಪಟ್ಟಿ, ವಿವರ ನೀಡಿದರೆ ಅವರನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಳ್ಳುಲು ಸಿದ್ದವಿರುವುದಾಗಿ   ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಹೇಳಿದ್ದಾರೆ.

ಭಾರತದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಶಿಪ್ (ಎನ್ಆರ್ಸಿ) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಭಾರತ ಹಾಗೂ ಬಾಂಗ್ಲಾದೇಶದ ಸಂಬಂಧ ಸಹಜವಾಗಿದೆ ಇದರಿಂದ ನಮಗೇನೂ ತೊಂದರೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದರು. 

ಇದಕ್ಕೂ ಮುನ್ನ ಮೊಮೆನ್ ಅವರು ಉದ್ದೇಶಿತ ಭಾರತ ಭೇಟಿ ರದ್ದುಪಡಿಸಿದ್ದರು.ಎನ್ಆರ್ಸಿ ಬಗ್ಗೆ ಪ್ರಕ್ರಿಯೆ ನೀಡಿದ ಅವರು, ಇದು ಭಾರತದ ಆಂತರಿಕ ವಿಚಾರ  ಇದರಿಂದ ಬಾಂಗ್ಲಾದೇಶಕ್ಕೆ ಯಾವುದೇ ತೊಂದರೆ ಇಲ್ಲ ಎಂದೂ  ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com